ಬಿಗ್ ಬಾಸ್ ಸ್ಪರ್ಧಿ, ನಟಿ ವನಿತಾ ವಿಜಯ್ ಕುಮಾರ್ 3ನೇ ಪತಿ ನಿಧನ

ಟಿ ಹಾಗೂ ಬಿಗ್ ಬಾಸ್ (Bigg Boss) ಸ್ಪರ್ಧಿ ವನಿತಾ ವಿಜಯ್ ಕುಮಾರ್ (Vanitha Vijay Kumar) ಲಾಕ್ ಡೌನ್ ಸಮಯದಲ್ಲಿ ಸಿಂಪಲ್ ಆಗಿ ಮದುವೆ ಆಗಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಆಗಲೇ ಇಬ್ಬರು ಗಂಡಂದಿರನ್ನು ತೊರೆದಿದ್ದ ವನಿತಾಗೆ ಅದು ಮೂರನೇ ಮದುವೆ ಆಗಿತ್ತು. ಮೂರನೇ ಗಂಡನಾಗಿದ್ದ ಪೀಟರ್ ಪೌಲ್ ಆಗಲೇ ಮದುವೆ ಆಗಿದ್ದರಿಂದ ಆತನ ಪತಿ ಬೀದಿ ರಂಪ, ಹಾದಿ ರಂಪ ಮಾಡಿದ್ದರು.

ಈ ಮದುವೆ ಆರೇಳು ತಿಂಗಳು ಕೂಡ ಉಳಿಯಲಿಲ್ಲ. ಪೀಟರ್ ಪೌಲ್ (Peter Paul) ರನ್ನು ತೊರೆದು ಮತ್ತೊಂದು ಮದುವೆ ಆಗುವ ಸೂಚನೆಯನ್ನೂ ನೀಡಿದ್ದರು ವನಿತಾ ವಿಜಯ್ ಕುಮಾರ್.  ಇದೀಗ ಪೀಟರ್ ಪೌಲ್ ನಿಧನ (Passed Away) ಹೊಂದಿರುವ ಸುದ್ದಿಯನ್ನು ವನಿತಾ ಅವರೇ ಪ್ರಕಟಿಸಿದ್ದಾರೆ. ಈ ಕುರಿತು ಅವರು ಭಾವುಕರಾಗಿ ಪತ್ರವೊಂದನ್ನು ಬರೆದಿದ್ದಾರೆ.

ಪೀಟರ್ ಆಸ್ಪತ್ರೆಯಲ್ಲಿದ್ದಾಗ ಸ್ವತಃ ವನಿತಾ ಅವರೇ ಖರ್ಚು ವೆಚ್ಚ ನೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವನಿತಾರಿಂದ ದೂರವಾದ ನಂತರ ಪೀಟರ್ ಮತ್ತಷ್ಟು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗುತ್ತಿದೆ. ಇದನ್ನೂ ಓದಿ:ಪಡ್ಡೆಹೈಕ್ಳಿಗೆ ಬೋಲ್ಡ್‌ ಲುಕ್‌ನಿಂದ ಹಾಟ್‌ ಟ್ರೀಟ್‌ ನೀಡಿದ ಲಕ್ಷ್ಮಿ ರೈ

ವಿಪರೀತ ಕುಡಿತದ ಚಟಕ್ಕೆ ಬಿದ್ದಿದ್ದ ಪೌಲ್‍, ಅನಾರೋಗ್ಯದ ಕಾರಣದಿಂದಾಗಿ ಕಳೆದ ಒಂದು ವರ್ಷದಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಚಿಕಿತ್ಸೆ ಫಲಕಾರಿಯಾಗದೇ ಪೀಟರ್ ನಿಧನಹೊಂದಿದ್ದಾರೆ. ಈ ಕುರಿತು ಪತ್ರ ಬರೆದಿರುವ ವನಿತಾ, ‘ನಿಮಗೆ ಶಾಂತಿ ಸಿಗಲಿ. ನೀವು ಬಯಸಿದ ನೆಮ್ಮದಿಯ ಜಾಗಕ್ಕೆ ಹೋಗಿರುತ್ತೀರಿ ಎನ್ನುವ ವಿಶ್ವಾಸ ನನಗಿದೆ’ ಎಂದು ಬರೆದಿದ್ದಾರೆ.