ದಾಂಪತ್ಯಕ್ಕೆ ಅಂತ್ಯ ಹಾಡಿದ ನಟಿ, ಡಿವೋರ್ಸ್ ಬಗ್ಗೆ ಬಿಗ್ ಬಾಸ್ ಚೈತ್ರಾ ಅಪ್‌ಡೇಟ್

ನಿರೂಪಕಿ, ಬಿಗ್ ಬಾಸ್ ಸ್ಪರ್ಧಿ (Bigg Boss Kannada) ಚೈತ್ರಾ ವಾಸುದೇವನ್ (Chaitra Vasudevan) ಅವರು ತಮ್ಮ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್‌ವೊಂದನ್ನ ಕೊಟ್ಟಿದ್ದಾರೆ. 6 ವರ್ಷಗಳ ದಾಂಪತ್ಯಕ್ಕೆ ನಟಿ ಚೈತ್ರಾ ಅವರು ಅಂತ್ಯ ಹಾಡಿದ್ದಾರೆ. ತಮ್ಮ ಡಿವೋರ್ಸ್ (Divorce) ಬಗ್ಗೆ ನಟಿ ಇದೀಗ ಮೌನ ಮುರಿದಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ನಟಿ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ.

ಈವೆಂಟ್‌ವೊಂದರಲ್ಲಿ ಚೈತ್ರಾ ಅವರನ್ನ ನೋಡಿ ಉದ್ಯಮಿ ಸತ್ಯ ನಾಯ್ಡು (Sathya Naidu) ಅವರು ಇಷ್ಟಪಟ್ಟು ಹಿರಿಯರನ್ನ ಒಪ್ಪಿಸಿ, 2017ರಲ್ಲಿ ಮದುವೆಯಾದರು. ಕುಂದಾಪುರದ ಹುಡುಗಿ ಚೈತ್ರಾ ಜೊತೆ ಸತ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಿನಿಮಾ ಕಾರ್ಯಕ್ರಮದ ನಿರೂಪಣೆ, ಬಿಗ್ ಬಾಸ್ ಮನೆಗೆ ಕಾಲಿಟ್ಟ ಚೈತ್ರಾ ಅಭಿಮಾನಿಗಳ ಗಮನ ಸೆಳೆದರು.

ನನ್ನ ಕೆರಿಯರ್‌ಗೆ ಪತಿ ಕುಟುಂಬದ ಬೆಂಬಲವಿದೆ ಎಂದು ನಟಿ ಹೇಳಿದ್ದರು. ಚೆನ್ನಾಗಿದ್ದ ಸಂಸಾರದಲ್ಲಿ ಅದು ಏನಾಯ್ತೋ ಏನೋ ಈಗ ನಿರೂಪಕಿ ಚೈತ್ರಾ-ಸತ್ಯ ಅವರ ದಾಂಪತ್ಯಕ್ಕೆ ಬ್ರೇಕ್ ಬಿದ್ದಿದೆ. ಇಬ್ಬರು ಡಿವೋರ್ಸ್ ಪಡೆದು ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಡಿವೋರ್ಸ್ ಪಡೆದು ಹಲವು ತಿಂಗಳುಗಳ ನಂತರ ನಟಿ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ:‘ನಾಗರಹಾವು’ ಚಿತ್ರದ ನಂತರ ಮತ್ತೆ ಒಂದಾಗಲಿದ್ದಾರೆ ದಿಗಂತ್-ರಮ್ಯಾ

ಇತ್ತೀಚೆಗೆ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಡಿವೋರ್ಸ್ ವಿಚಾರಗಳನ್ನು ಘೋಷಿಸುತ್ತಿದ್ದಾರೆ. ಇದೀಗ ಚೈತ್ರಾ ಕೂಡ ಅದನ್ನೇ ಮಾಡಿದ್ದಾರೆ. ಎಲ್ಲರಿಗೂ ನಮಸ್ಕಾರ. ಹಲವಾರು ತಿಂಗಳುಗಳಿಂದ ಸಾಕಷ್ಟು ಯೋಚಿಸಿದ ನಂತರ ನಾನು ನನ್ನ ವಿಚ್ಛೇದನದ ಬಗ್ಗೆ ನಿಮಗೆ ಹೇಳಲು ಧೈರ್ಯವನ್ನು ತೆಗೆದುಕೊಂಡಿದ್ದೇನೆ. ಸತ್ಯ ಮತ್ತು ನಾನು ಬೇರೆಯಾಗಿದ್ದೇವೆ. ನಿಂದನೆ /ದ್ವೇಷ ಬೇಡ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ನನ್ನ ಈ ಸ್ಥಿತಿಯಿಂದ ಹೊರಬರಲು ಕಷ್ಟಪಡುತ್ತಿದ್ದೇನೆ. ಕೆಲಸ ಮಾತ್ರ ಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ. ನಾನು ಈವೆಂಟ್ ಮತ್ತು ಟಿವಿ ಉದ್ಯಮದಲ್ಲಿ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನನ್ನ ಸೇವೆಯನ್ನು ಇನ್ನುಮುಂದೆಯೂ ಮುಂದುವರಿಸಲು ಬಯಸುತ್ತೇನೆ ಮತ್ತು ನಿಮ್ಮಿಂದ ಹೆಚ್ಚಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಇನ್ಸ್ಟಾಗ್ರಾಂ ಖಾತೆಯಲ್ಲಿ ಚೈತ್ರಾ ವಾಸುದೇವನ್ ಬರೆದುಕೊಂಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ನಟಿ ಶಾಕ್‌ ಕೊಟ್ಟಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]