ಬಿಗ್ ಬಾಸ್ ಸೀಸನ್-6 ಓಪನಿಂಗ್ ಡೇಟ್ ಫಿಕ್ಸ್

ಬೆಂಗಳೂರು: ಕಿಚ್ಚ ಸುದೀಪ್ ನಿರೂಪಕರಾಗಿರುವ ಬಹು ನಿರೀಕ್ಷಿತ ಬಿಗ್ ಬಾಸ್ ಸೀಸನ್-6 ಕೆಲವೇ ದಿನಗಳಲ್ಲೇ ಶುರುವಾಗಲಿದೆ.

ಬಿಗ್ ಬಾಸ್ ಸೀಸನ್- 6 ಮುಂದಿನ ಅಕ್ಟೋಬರ್ 21ರಂದು ಆರಂಭವಾಗಲಿದೆ ಎಂದು ಖಾಸಗಿ ವಾಹಿನಿ ಪ್ರಕಟಿಸಿದೆ. ಅಕ್ಟೋಬರ್ 21ರಂದು ಸಂಜೆ 6 ಗಂಟೆಯಿಂದ ಗ್ರಾಂಡ್ ಓಪನಿಂಗ್ ಕಾರ್ಯಕ್ರಮ ಪ್ರಸಾರವಾಗಲಿದೆ.

ಗ್ರಾಂಡ್ ಓಪನಿಂಗ್ ಕಾರ್ಯಕ್ರಮದ ದಿನಾಂಕದ ಪ್ರೋಮೋವನ್ನು ಖಾಸಗಿ ವಾಹಿನಿ ತನ್ನ ಫೇಸ್‍ಬುಕ್ ಪೇಜ್‍ನಲ್ಲಿ ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರ ಅಭಿನಯವನ್ನು ಎಲ್ಲರು ಮೆಚ್ಚಿಕೊಂಡಿದ್ದಾರೆ.

ಈ ಪ್ರೋಮೋದಲ್ಲಿ ಸುದೀಪ್ ಈ ಹಿಂದೆ ಬಿಗ್ ಬಾಸ್‍ನಲ್ಲಿದ್ದ ಹಳೆಯ ಸ್ಪರ್ಧಿಗಳನ್ನು ಅನುಕರಣೆ ಮಾಡಿದ್ದಾರೆ. ನಿಜ ಹೇಳ್ತೀನಿ ಬಿಗ್ ಬಾಸ್ ಇಲ್ಲಿ ನಾನು ನಾನಾಗಿ ಇದ್ದೀನಿ. ಎಲ್ಲರೂ ಸೇರಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಬಿಗ್‍ಬಾಸ್, ಎಷ್ಟು ನಾಟಕ ಬಿಗ್ ಬಾಸ್ ಎಂದು ಹಳೆಯ ಸ್ಪರ್ಧಿಗಳ ಅನುಕರಣೆ ಮಾಡಿದ್ದಾರೆ.

ಈ ಬಾರಿ ಬಿಗ್‍ಬಾಸ್ ಶೋನಲ್ಲಿ ಭಾಗವಹಿಸುವ 6 ಸ್ಪರ್ಧಿಗಳ ಪಟ್ಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೊದಲನೆಯದಾಗಿ ಆರ್.ಜೆ ರ್‍ಯಾಪಿಡ್ ರಶ್ಮಿ, ರ್‍ಯಾಪರ್ ಚಂದನ್ ಶೆಟ್ಟಿಯ `ಟಕೀಲಾ’ ಹಾಡಿನಲ್ಲಿ ಸೊಂಟ ಬಳುಕಿಸಿರುವ ಶಾಲಿನಿ, ಸ್ಯಾಂಡಲ್‍ವುಡ್ ನಟಿ ಭಾವನ ಮತ್ತು ಸುಮನ್ ರಂಗನಾಥ್ ಕೂಡ ಈ ಬಾರಿ ಬಿಗ್‍ಬಾಸ್ ಮನೆಗೆ ಕಾಲಿಡಲಿದ್ದಾರೆ ಎಂದು ಚರ್ಚೆಯಾಗುತ್ತಿದೆ.

ಬಿಗ್‍ಬಾಸ್ ಮನೆ ಅಂದಮೇಲೆ ಅಲ್ಲಿ ಮನರಂಜನೆ, ಆಟ, ಹರಟೆ ಎಲ್ಲವೂ ಇರಲೆಬೇಕು. ಹೀಗಾಗಿ ಈ ಬಾರಿ ಕುರಿ ಪ್ರತಾಪ್ ಅವರನ್ನು ಬಿಗ್‍ಬಾಸ್ ಮನೆಗೆ ಕಳುಹಿಸುವ ಯೋಚನೆಯನ್ನು ಬಿಗ್‍ಬಾಸ್ ಮಾಡಿದ್ದಾರಂತೆ. ಇತ್ತ ಬಿಗ್‍ಬಾಸ್ ಶೋನಲ್ಲಿ ಪ್ರೇಮ್ ಕುಮಾರಿ ಕೂಡ ಇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಶುಭಪುಂಜಾ, ನಟ ಟೆನ್ನಿಸ್ ಕೃಷ್ಣ, ಪುಟ್ಟಗೌರಿ ಖ್ಯಾತಿಯ ಶಿವರಂಜಿನಿ, ನಟ ಅನಿರುದ್ದ್, ಮುಂಗಾರು ಮಳೆ – 2 ನೇಹಾಶೆಟ್ಟಿ, ಸಿಲ್ಲಿಲಲ್ಲಿ ರವಿಶಂಕರ್, ಸರಿಗಮಪ ಚೆನ್ನಪ್ಪ, ನಟ ಅಚ್ಯುತ್ ಕುಮಾರ್, ಕಿರಿಕ್ ಪಾರ್ಟಿ ಚಂದನ್ ಆಚಾರ್, ನಟಿ ಮಯೂರಿ, ತಿಥಿ ಸಿನಿಮಾ ಖ್ಯಾತಿಯ ಅಭಿ, ಡಾ. ಶಂಕರೇಗೌಡ ಇವರೆಲ್ಲರ ಹೆಸರು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *