ಬಾಯಿಗೆ ಬಟ್ಟೆ ತುರುಕಿ ಜಮೀನಿನಲ್ಲೇ ಮಹಿಳೆಯ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್!

ಕಲಬುರಗಿ: ಬಾಯಿಗೆ ಬಟ್ಟೆ ತುರುಕಿ ಮಹಿಳೆಯ ಹತ್ಯೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಮಹಿಳೆಯನ್ನು ದುಷ್ಕರ್ಮಿಗಳು ಪೈಶಾಚಿಕವಾಗಿ ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆ ಮಾಡಿಲಾಗಿದೆ.

ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ನಿವಾಸಿ ಶುಕರಾ ಬಿ(65) ಎಂದಿನಂತೆ ಗುರುವಾರ ಬೆಳಗ್ಗೆ ತನ್ನ ಜಮೀನಿಗೆ ತೆರಳಿದ್ದಳು. ಸಂಜೆ ಮನೆಗೆ ವಾಪಾಸ್ ಬರೋವಾಗ ಮೋರಾರ್ಜಿ ದೇಸಾಯಿ ವಸತಿ ನಿಲಯದ ಬಳಿ ದುಷ್ಕರ್ಮಿಗಳು ಶುಕರಾಳನ್ನ ಸಂಪೂರ್ಣ ವಿವಸ್ತ್ರಗೊಳಿಸಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರವೆಸಗಿ ನಂತರ ಕೃತ್ಯ ಮುಚ್ಚಿಹಾಕಲು ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿದ್ದಾರೆ.

ಸಂಜೆ ಶುಕರಾ ಕುಟುಂಬಸ್ಥರು ಜಮೀನಿಗೆ ಹೋದವಳು ಮನೆಗೆ ಇನ್ನು ವಾಪಾಸ್ ಬಂದಿಲ್ಲ ಅಂತಾ ವಿಚಾರಿಸಿ ಹುಡುಕುವ ಪ್ರಯತ್ನ ಮಾಡಿದ್ದಾರೆ. ಆಗ ರಸ್ತೆಯ ಬದಿಯ ನೀರು ತುಂಬಿದ ತಗ್ಗುಗುಂಡಿಯ ಬಳಿ ನಗ್ನ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಮಾಡಬೂಳ್ ಠಾಣೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಂತ ಕಲಬುರಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೇಲ್ನೋಟಕ್ಕೆ ಮಹಿಳೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದು, ಕಂಡುಬಂದಿದೆ.

ಪ್ರಕರಣವನ್ನು ದಾಖಲಿಸಿಕೊಂಡಿರುವ ಮಾಡಬೂಳ್ ಠಾಣೆಯ ಪೊಲೀಸರು ಕಾಮುಕರ ಬಂಧನಕ್ಕೆ ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *