ಹೊಡೆದು ಜನಾರ್ದನ ರೆಡ್ಡಿ ಹೆಸರು ಹಾಕಿಸಿದ್ದಾರೆ- ಡೀಲ್ ಪ್ರಕರಣಕ್ಕೆ ಸ್ಫೋಟಕ ತಿರುವು

ಬೆಂಗಳೂರು: ಡೀಲ್ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹೆಸರು ಹೇಳುವಂತೆ ಚಿನ್ನ ಖರೀದಿ ಮಾಡಿದ್ದ ರಮೇಶ್ ಎಂಬವರಿಗೆ ಬಾಸುಂಡೆ ಬರುವಂತೆ ಪೊಲೀಸರು ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ರಾಜಮಹಲ್ ಜ್ಯುವೆಲರ್ಸ್ ಮಾಲೀಕ ರಮೇಶ್ ಮಾರ್ಚ್‍ನಲ್ಲಿ ಚಿನ್ನ ಖರೀದಿ ಮಾಡಿದ್ದರು. ಇವರ ಮೇಲೆ ಪೊಲೀಸರು ದರ್ಪ ಎಸಗಿದ್ದು, ಡೀಲ್ ಪ್ರಕರಣದ ರಮೇಶ್ ಕೊಠಾರಿ ಬೇರೆ, ರಾಜಮಹಲ್ ಜ್ಯುವೆಲರ್ಸ್ ಮಾಲೀಕ ರಮೇಶ್ ಬೇರೆ ಎಂದು ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ವಕೀಲ ಚಂದ್ರಶೇಖರ್ ಗಂಭೀರ ಆರೋಪ ಮಾಡಿದ್ದಾರೆ.

ಪ್ರಕರಣದ ಎ4 ಆರೋಪಿ ರಮೇಶ್ ಅವರನ್ನು ಬಳ್ಳಾರಿಯಿಂದ ಬಂಧಿಸಿ ಕಳೆದ ಶುಕ್ರವಾರ ಕರೆದುಕೊಂಡು ಬಂದು, ರಮೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಜನಾರ್ದನ ರೆಡ್ಡಿ ಹಾಗೂ ಅಲಿಖಾನ್ ಅವರ ಹೆಸರು ಹೇಳುವಂತೆ ದೌರ್ಜನ್ಯ ನೀಡಿದ್ದಾರೆ. ರಮೇಶ್ ಮೇಲೆ ಹಲ್ಲೆ ಮಾಡಿರುವಂತಹ ಫೋಟೋಗಳು ನಮ್ಮಲ್ಲಿದೆ. ರಾಜಕೀಯ ಒತ್ತಡದಿಂದ ಜನಾರ್ದನ ರೆಡ್ಡಿ ಹೆಸರು ಇದರಲ್ಲಿ ತಳುಕು ಹಾಕಿಕೊಂಡಿದೆ. ಜನಾರ್ದನ ರೆಡ್ಡಿಯವರನ್ನು ಬಂಧಿಸಲೇಬೇಕೆಂದು ಈ ಪ್ರಕರಣದ ಹಿಂದೆ ದೊಡ್ಡ ಮಟ್ಟದಲ್ಲಿ ಇರುವಂತಹ ರಾಜಕಾರಣಿಗಳ ಕೈಗಳ ಕೈವಾಡವಿದೆ ಅಂತ ವಕೀಲ ಚಂದ್ರಶೇಖರ್ ಗಂಭೀರವಾಗಿ ಆರೋಪಿಸಿದ್ದಾರೆ.

ಚಿನ್ನ ಖರೀದಿ ಮಾಡಿರುವ ಕುರಿತು ರಮೇಶ್ ಬಳಿ ಎಲ್ಲಾ ದಾಖಲೆ ಇದೆ. ಆದರೆ ಬೇರೆ ಯಾವುದೇ ಉದ್ದೇಶಕ್ಕೆ ಹಣದ ವರ್ಗಾವಣೆ ಆಗಿಲ್ಲ. ಪೊಲೀಸರು ಒತ್ತಡ ಹಾಕಿ ಜನಾರ್ದನ ರೆಡ್ಡಿ ಹೆಸರು ಹೇಳುವಂತೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದು, ಪ್ರಮುಖವಾಗಿ ಡಿಸಿಪಿ ಗಿರೀಶ್ ಮತ್ತು ಎಸಿಪಿ ವೆಂಕಟೇಶ್ ಪ್ರಸನ್ನ ಹಲ್ಲೆ ಮಾಡಿದ್ದಾರೆ. ನಾವು ಕಾನೂನಿನ ಚೌಕಟ್ಟಿನಲ್ಲೇ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *