ಸ್ಥಳೀಯರಿಗೆ ಖಾಸಗಿ ವಲಯದಲ್ಲಿ ಶೇ.75ರಷ್ಟು ಉದ್ಯೋಗವಕಾಶ – ಸುಪ್ರೀಂನಲ್ಲಿ ಹರ್ಯಾಣಕ್ಕೆ ಜಯ

ನವದೆಹಲಿ: ಖಾಸಗಿ ವಲಯದಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಶೇ.75ರಷ್ಟು ಉದ್ಯೋಗವಕಾಶ ನೀಡುವ ಸಂಬಂಧ ಜಾರಿಯಾಗಿದ್ದ ಕಾಯ್ದೆ ಜಾರಿಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನೀಡಿದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ.

ಹರ್ಯಾಣ ಸರ್ಕಾರ ಸ್ಥಳೀಯ ಉದ್ಯೋಗಿಗಳಿಗೆ ಖಾಸಗಿ ವಲಯದಲ್ಲೂ ಶೇ.75ರಷ್ಟು ಉದ್ಯೋಗವಕಾಶಗಳನ್ನು ಮೀಸಲಿಡಬೇಕೆಂದು ಕಾಯ್ದೆ ತಂದಿತ್ತು. ಇದನ್ನೂ ಓದಿ: ಇಸ್ಲಾಮಿಕ್ ಸಮವಸ್ತ್ರ ಪದ್ಧತಿಯನ್ನು ಶಾಲೆಯಲ್ಲಿ ತರಲು ಪ್ರಯತ್ನ: ಹಿಂದೂ ಮಹಾಸಭಾ ಕಿಡಿ

ಈ ಕಾಯ್ದೆಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ತಡೆ ನೀಡಿತ್ತು ಬಳಿಕ ಫೆಬ್ರವರಿ ತಿಂಗಳ ಆರಂಭದಲ್ಲಿ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಸರ್ಕಾರ ಈ ಬಗ್ಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂ ಕೋರ್ಟ್ ಈ ತಡೆಯಾಜ್ಞೆಯನ್ನು ತೆರವುಗೊಳಿಸಿದೆ.

ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಪಿ.ಎಸ್ ನರಸಿಂಹ ನೇತೃತ್ವದ ನ್ಯಾಯಪೀಠ, ಸುಪ್ರೀಂ ಕೋರ್ಟ್ ಉದ್ಯೋಗಕ್ಕೆ ಬೇಕಾಗಿರುವ ಅರ್ಹತೆಯ ಬಗ್ಗೆ ವಿಚಾರಣೆ ನಡೆಸುವುದಿಲ್ಲ. ಈ ಬಗ್ಗೆ ಹೈಕೋರ್ಟ್ ನಾಲ್ಕು ವಾರಗಳಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ಆದೇಶಿಸಿದೆ. ಇದನ್ನೂ ಓದಿ: ಮತಕ್ಕಾಗಿ ಕಾಂಗ್ರೆಸ್, ಪಂಜಾಬ್ ಸಿಎಂ ದೇಶವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ: ಯೋಗಿ ಆದಿತ್ಯನಾಥ್

ಹರ್ಯಾಣ ಸರ್ಕಾರ ಸ್ಥಳೀಯ ಉದ್ಯೋಗಿಗಳಿಗೆ ಅವಕಾಶ ನೀಡಲು ಸ್ಥಳೀಯ ಅಭ್ಯರ್ಥಿಗಳ ಮಸೂದೆ 2020ನ್ನು ಪಾಸ್ ಮಾಡಿತ್ತು. ಈ ಕಾಯ್ದೆಯ ಪ್ರಕಾರ ಗರಿಷ್ಟ 30 ಸಾವಿರ ವರೆಗಿನ ತಿಂಗಳ ವೇತನದ ಕೆಲಸಕ್ಕೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Comments

Leave a Reply

Your email address will not be published. Required fields are marked *