ಬೆಳಗಾವಿ: 33 ಕಿಲೋ ತೂಕದ ಅಪರೂಪದ ಖಟಲಾ ಪ್ರಭೇದ ಮೀನು ಘಟಪ್ರಭಾ ನದಿಯ ಹಿಡಕಲ್ ಜಲಾಶಯದಲ್ಲಿ ಮೀನುಗಾರನ ಬಲೆಗೆ ಬಿದ್ದಿದೆ.
ಘಟಪ್ರಭಾ ನದಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಮೀನು ಸಿಕ್ಕಿದ್ದು ವಿಶೇಷವಾಗಿದೆ. ಹುಕ್ಕೇರಿ ಪಟ್ಟಣದ ಶಿವು ಭೋವಿ ಮೀನಿಗಾಗಿ ನದಿಗೆ ಬಲೆ ಹಾಕಿದ್ದರು. ಈ ಬಲೆಯಲ್ಲಿ ಕೇವಲ ಒಂದರಿಂದ ಎರಡು ಕಿಲೋ ತೂಕದ ಮೀನು ಮಾತ್ರ ಸಿಗುತ್ತಿತ್ತು. ಆದರೆ ಅಪರೂಪವಾಗಿ ಈ ಸಾಮಾನ್ಯ ಬಲೆಯಲ್ಲಿ ಖಟಲಾ ಪ್ರಭೇದದ ಮೀನು ಸಿಕ್ಕಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮೀನುಗಾರ, ನಾನು ಪ್ರತಿದಿನ ಮೀನಿಗಾಗಿ ಬಲೆ ಬೀಸುತ್ತಿದ್ದೆ. ದಿನ ಸಣ್ಣ ಪುಟ್ಟ ಮೀನುಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದೆ. ಆದರೆ ನನ್ನ ಜೀವನದಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದ ಮೀನು ಸಿಕ್ಕಿರುವುದು ಇದೇ ಮೊದಲ ಬಾರಿ ಎಂದು ಮೀನುಗಾರ ಶಿವು ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಚಿಕ್ಕೋಡಿ ಭಾಗದಲ್ಲಿ ಒಂದೇ ದಿನ ಮೀನು 9 ಸಾವಿರ ರೂ. ಗಳಿಗೆ ಮಾರಾಟವಾಗುವದರ ಮೂಲಕ ದಾಖಲೆಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply