ಬಿಗ್ ಬುಲೆಟಿನ್ | August 31, 2021 | ಭಾಗ-2

ಉಗ್ರರ ವಿರುದ್ಧ ಸಮರ ಸಾರಿ ಅಫ್ಘಾನಿಸ್ತಾನ ಪ್ರವೇಶಿಸಿದ್ದ ಅಮೆರಿಕ 20 ವರ್ಷಗಳ ಸುದೀರ್ಘ ಯುದ್ಧಕ್ಕೆ ತೆರೆ ಎಳೆದಿದೆ. ಅಮೆರಿಕದ ಕಟ್ಟ ಕಡೆಯ ಸೇನೆ ಅಫ್ಘಾನಿಸ್ತಾನ ತೊರೆದು ಸ್ವದೇಶಕ್ಕೆ ಮರಳಿದೆ. ಈಗ ಕಾಬೂಲ್ ಸೇರಿದಂತೆ ಆಫ್ಘಾನ್ ತಾಲಿಬಾನಿಗಳ ಮುಷ್ಠಿಯಲ್ಲಿದೆ. ತಮ್ಮವರ ಸ್ಥಳಾಂತರ ಕಾರ್ಯಚರಣೆ ಮುಗೀತಾ ಇದ್ದಂತೆ ಆಫ್ಘಾನ್ ನೆಲದಿಂದ ಅಮೆರಿಕ ಸೈನಿಕರು ವಾಪಾಸ್ ಆಗಿದ್ದಾರೆ. ಆಫ್ಘಾನ್ ತೊರೆಯುವ ಮುನ್ನ ಸೇನಾ ಸಾಮಾಗ್ರಿ, 73 ಯುದ್ಧ ವಿಮಾನ, ಸೇನಾ ವಾಹನಗಳು ಮರುಬಳಕೆ ಆಗದಂತೆ ಅಮೆರಿಕ ಸೇನಾಪಡೆ ನಿಷ್ಕ್ರೀಯಗೊಳಿಸಿದೆ. ಆಫ್ಘಾನ್‍ನಿಂದ ಕಟ್ಟಕಡೆಯದಾಗಿ ಅಮೆರಿಕ ವಿಮಾನವೇರಿದ ಸೇನಾಧಿಕಾರಿಯ ಚಿತ್ರವನ್ನ ಅಮೆರಿಕ ರಕ್ಷಣಾ ಸಚಿವಾಲಯ ಟ್ವೀಟ್ ಮಾಡಿದೆ.

Comments

Leave a Reply

Your email address will not be published. Required fields are marked *