ರಜತ್ ಜೊತೆ ನಿವೇದಿತಾ ಗೌಡ `ಲಕ ಲಕ ಮೋನಿಕಾ’

ಬಾತ್ ರೂಮ್ ನಲ್ಲೇ ರೀಲ್ಸ್ ಮಾಡ್ಕೊಂಡು ಸದಾ ನೆಟ್ಟಿಗರ ಮನತಣಿಸುವ, ಮೋಹಕ ಅವತಾರದಲ್ಲಿ ಪಡ್ಡೆ ಹುಡುಗರ ಪಾಲಿನ ಪಾರಿಜಾತವಾಗಿರೋ ನಿವೇದಿತಾ ವೆರೈಟಿ ವೆರೈಟಿ ರೀಲ್ಸ್ ಮೂಲಕ ಗಮನಸೆಳೆದಿದ್ದಾರೆ. ಇದೀಗ ಬಿಗ್ ಬಾಸ್ ಖ್ಯಾತಿಯ ರಜತ್ ಜೊತೆ ರೀಲ್ಸ್ ಮಾಡಿದ್ದಾರೆ. ಅದು ಸಖತ್ ಟ್ರೆಂಡ್ ಆಗ್ತಿದೆ. ರಜನಿಕಾಂತ್ ಅಭಿನಯದ ಕೂಲಿ ಸಿನಿಮಾದ ಮೋನಿಕಾ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ ನಿವೇದಿತಾ ಗೌಡ.

ನಿವೇದಿತಾ ಗೌಡ ಜೊತೆಗೆ ಮಾಜಿ ಬಿಗ್ ಮಾಸ್ ಸ್ಪರ್ಧಿಗಳಾದ ರಜತ್, ಧನರಾಜ್ ಹಾಗೂ ನಟಿ ಅಖಿಲಾ ಪ್ರಕಾಶ್ ಸಖತ್ ಆಗಿಯೇ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಮಚ್ಚು ಹಿಡಿದು ರೀಲ್ಸ್ ಮಾಡಿ ಅದಕ್ಕೆ ತಕ್ಕ ಶಿಕ್ಷೆ ಅನುಭವಿಸಿ ಬಂದಿರುವ ರಜತ್ ಇದೀಗ ನಿವೇದಿತಾ ಗೌಡ ಜೊತೆ ಲವ್ ಯು ಮೋನಿಕಾ ಅಂತಾ ಹೆಜ್ಜೆ ಹಾಕಿದ್ದಾರೆ.

ಕೂಲಿ ಸಿನಿಮಾದಲ್ಲಿ ಮೋನಿಕಾ ಆಗಿ ಸೊಂಟ ಬಳುಕಿಸಿದ್ದಾರೆ ಪೂಜಾ ಹೆಗ್ಡೆ. ಅದೇ ಹಾಡಿಗೆ ನಿವೇದಿತಾ ಗೌಡ ಹಾಗೂ ಸ್ನೇಹಿತರು ಮಸ್ತ್ ಮಸ್ತ್ ಸ್ಟೇಪ್ ಹಾಕಿದ್ದಾರೆ. ಈ ಸ್ಟೆಪ್ ನೋಡಿ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ಸ್ ಮಾತ್ರ ವೆರೈಟಿ ವೆರೈಟಿ ಆಗಿಯೇ ಬರುತ್ತಿವೆ.