ಬೈಡನ್ ನಿವಾಸದ ಮೇಲೆ ವಿಮಾನ ಹಾರಾಟ – ದಾಳಿ ಭೀತಿಯಿಂದ ಸ್ಥಳಾಂತರ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ನಿವಾಸದ ಮೇಲೆ ವಿಮಾನವೊಂದು ಹಾರಾಟ ನಡೆಸಿದ್ದು, ದಾಳಿಯ ಭೀತಿಗೆ ಅವರನ್ನು ಹಾಗೂ ಅವರ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಶ್ವೇತಭವನ ತಿಳಿಸಿದೆ.

ಬೈಡನ್ ಅವರ ರೆಹೋಬೋತ್ ಬೀಚ್ ಬಳಿಯ ನಿವಾಸದ ಮೇಲೆ ನಿರ್ಬಂಧಿತ ವಾಯು ಪ್ರದೇಶದಲ್ಲಿ ಸಣ್ಣ ಖಾಸಗಿ ವಿಮಾನವೊಂದು ಹಾರಾಟ ನಡೆಸಿರುವುದು ಕಂಡುಬಂದಿದೆ. ಈ ಹಿನ್ನೆಲೆ ದಾಳಿ ಭೀತಿಯಿಂದ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಪರಮಾಣು ಪರೀಕ್ಷೆ ಆತಂಕದ ನಡುವೆಯೇ ಇನ್ನೊಂದು ಕ್ಷಿಪಣಿ ಪರೀಕ್ಷಿಸಿದ ಉತ್ತರ ಕೊರಿಯಾ

joe biden

ಅಮೆರಿಕ ಅಧ್ಯಕ್ಷ ಹಾಗೂ ಪ್ರಥಮ ಮಹಿಳೆ ಜಿಲ್ ಬೈಡನ್ ಸುರಕ್ಷಿತವಾಗಿದ್ದಾರೆ. ಸದ್ಯ ಯಾವುದೇ ದಾಳಿ ನಡೆದಿಲ್ಲ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಇಮ್ರಾನ್ ಖಾನ್ ಹತ್ಯೆಗೆ ಸಂಚು- ಬಿಗಿ ಭದ್ರತೆ

ಖಾಸಗಿ ವಿಮಾನ ತಪ್ಪಿ ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸಿತು. ಬಳಿಕ ಅದನ್ನು ತಕ್ಷಣವೇ ಬೇರೆಡೆಗೆ ಕೊಂಡೊಯ್ಯಲಾಯಿತು. ವಿಮಾನ ಚಲಾಯಿಸುತ್ತಿದ್ದ ಪೈಲಟ್‌ಗೆ ರೇಡಿಯೋ ಚಾನೆಲ್‌ನಲ್ಲಿ ದೋಷವಿದ್ದು, ಮಾರ್ಗದರ್ಶನವನ್ನು ಅನುಸರಿಸಲು ಸಾಧ್ಯವಾಗಿಲ್ಲ ಎಂದು ರಹಸ್ಯ ಸೇವೆಯ ವಕ್ತಾರ ಅಂಥೋನಿ ಗುಗ್ಲಿಲ್ಮಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *