ಬೀದರ್: ಡೆಡ್ಲಿ ಮಹಾಮಾರಿ ಕೊರೊನಾ ಚೀನಾದಲ್ಲಿ ಕಾಣಿಸಿಕೊಂಡು ಮರಣ ಮೃದಂಗ ಬಾರಿಸುತ್ತಿದೆ. ಇದರ ಎಫೆಕ್ಟ್ ವಿಶ್ವದ ಬಹುತೇಕ ದೇಶಗಳಿಗೆ ತಟ್ಟಿದ್ದು ಎಲ್ಲಾ ದೇಶಗಳು ಈ ವಿಷಯದಲ್ಲಿ ಪುಲ್ ಅಲರ್ಟ್ ಆಗಿವೆ.
ಈ ಡೆಡ್ಲಿ ವೈರಸ್ ಭೀತಿ ಈಗ ಭಾರತೀಯರ ಕಲರ್‍ಫುಲ್ ಹಬ್ಬ ಹೋಳಿಗೂ ತಟ್ಟಿದೆ. ಪ್ರತಿ ವರ್ಷ ಗಡಿ ಜಿಲ್ಲೆ ಬೀದರ್‍ನಲ್ಲಿ ಹೋಳಿ ಹಬ್ಬವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿತ್ತು. ಆದರೆ ಈ ಕೊರೊನಾ ವೈರಸ್ ಸಂಭ್ರಮವನ್ನೇ ಕಿತ್ತುಕೊಂಡಿದೆ.

ರಂಗಿನಾಟಕ್ಕೆ ನಾಳೆ ಒಂದೇ ದಿನ ಬಾಕಿಯಿದ್ದು, ಇಷ್ಟೊತ್ತಿಗಾಗಲೇ ಬಹುತೇಕ ವಹಿವಾಟು ಆಗುತ್ತಿತ್ತು. ಆದರೆ ಮಕ್ಕಳ ಆಟಿಕೆ ವಸ್ತುಗಳು ಹಾಗೂ ಕೆಲ ಬಣ್ಣಗಳು ಚೀನಾದಿಂದ ಆಮದು ಆಗಿರುವ ವದಂತಿ ಹಿನ್ನೆಲೆಯಲ್ಲಿ ಪೋಷಕರು ಇವುಗಳನ್ನು ತಮ್ಮ ಮಕ್ಕಳಿಗೆ ಕೊಡಿಸಲು ನಿರಾಕರಿಸುತ್ತಿದ್ದಾರೆ.

ಇದರಿಂದ ಬಂಡವಾಳ ಹಾಕಿರುವ ಮಾಲೀಕರ ಎದೆಯಲ್ಲಿ ಢವ ಢವ ಶುರುವಾಗಿದ್ದು ದೇವರೇ ಕಾಪಾಡು ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಂಡು ಬಿಟ್ಟಿದ್ದಾರೆ. ಶೇ.60 ರಷ್ಟು ವ್ಯಾಪಾರವಾಗಬೇಕಿತ್ತು. ಆದರೆ ಸದ್ಯ ಶೇ.30 ರಷ್ಟು ಮಾತ್ರ ವ್ಯಾಪಾರವಾಗಿದ್ದು, ಕೊರೊನಾ ವೈರಸ್ ಮಾಲೀಕರಿಗೆ ಶಾಕ್ ನೀಡಿದೆ.


Leave a Reply