ಕಚ್ಚಾ ಬದಾಮ್ ಸಿಂಗರ್ ಭುಬನ್ ಬದ್ಯಾಕರ್ ಆಸ್ಪತ್ರೆಗೆ ದಾಖಲು

ಕೋಲ್ಕತ್ತಾ: ಕಚ್ಚಾ ಬಾದಮ್ ಸಿಂಗರ್ ಭುಬನ್ ಬದ್ಯಾಕರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೌದು. ಸೋಮವಾರ ನಡೆದ ಕಾರು ಅಪಘಾತದಲ್ಲಿ ಭುಬನ್ ಗಾಯಗೊಂಡು ಸುರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾತ್ರೋ ರಾತ್ರಿ ಫೇಮಸ್ ಆಗಿರುವ ಭುಬನ್, ಇತ್ತೀಚೆಗೆ ಕಾರು ಖರೀದಿ ಮಾಡಿದ್ದಾರೆ. ಈ ಕಾರಿನ ಡ್ರೈವಿಂಗ್ ಕಲಿಯುತ್ತಿದ್ದ ಸಂದರ್ಭದಲ್ಲಿ ಗೋಡೆಗೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಭುಬನ್ ಎದೆಗೆ ಏಟು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಸದ್ಯ ಅವರು ಆಸ್ಪತ್ರೆಯಲ್ಲಿದ್ದಾರೆ.

ಕಡಲೆ ಕಾಯಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಭುಬನ್ ಅವರು ಕಚ್ಚಾ ಬದಾಮ್ ಹಾಡು ಹಾಡಿ ರಾತ್ರಿ ಬೆಳಗಾವುದೊರಳಗೆ ಭಾರೀ ಫೇಮಸ್ ಆಗಿದ್ದರು. ಇವರ ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲದೆ ಅನೇಕ ಮಂದಿ ರೀಲ್ಸ್ ಕುಡ ಮಾಡುತ್ತಿದ್ದಾರೆ. ಇದನ್ನೂ ಓದಿ: ಪ್ರಜೆಗಳನ್ನು ರಕ್ಷಿಸಿ ಭಾರತ ಮಾದರಿಯಾದ್ರೆ, ನಿಮ್ಮ ರಕ್ಷಣೆ ನಿಮ್ಮ ಹೊಣೆ ಎಂದ ಅಮೆರಿಕ..!

ಹಳೆಯ ಚೈನ್, ಮೊಬೈಲ್‍ಗಳನ್ನು ತೆಗೆದುಕೊಂಡು ಅದಕ್ಕೆ ಪ್ರತಿಯಾಗಿ ಭುಬನ್ ಕಡಲೆಕಾಯಿ ನೀಡುತ್ತಿದ್ದರು. ಹಾಡಿನ ಸಾಹಿತ್ಯ ಕೂಡ ಅದೇ ಅರ್ಥವನ್ನು ನೀಡಿತ್ತು. ತಾನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವುದಕ್ಕೆ ಖುಷಿ ಇದೆ ಎಂದಿದ್ದಾರೆ. ಅಲ್ಲದೆ ಆ ಬಳಿಕ ಅವರಿಗೆ ಸಿನಿಮಾ ಹಾಡುಗಳನ್ನು ಹಾಡುವ ಅವಕಾಶವೂ ದೊರೆಯಿತು.

ಇತ್ತೀಚೆಗೆ ಭುಬನ್ ಅವರು ಕೋಲ್ಕತ್ತಾದ ಪಬ್ ನಲ್ಲಿ ಹಾಡು ಹಾಡಲು ತೆರಳಿದ್ದರು. ರಾಕ್ ಸ್ಟಾರ್ ನಂತೆ ಡ್ರೆಸ್ಸಿಂಗ್ ಮಾಡುವ ಮೂಲಕ ನ್ಯೂ ಲುಕ್ ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರು. ಇತ್ತೀಚೆಗೆ ಪಶ್ಚಿಮ ಬಂಗಾಳದ ಪೊಲಿಸರು ಕೂಡ ಭುಬನ್ ಅವರನ್ನು ಸನ್ಮಾನ ಮಾಡಿದ್ದರು.

Comments

Leave a Reply

Your email address will not be published. Required fields are marked *