ಸೇತುವೆ ಕೆಳಗೆ ಎಳೆದುಕೊಂಡು ಹೋಗಿ, ಯುವತಿಯ ಕೈಕಾಲು ಕಟ್ಟಿ ನಾಲ್ವರಿಂದ ಗ್ಯಾಂಗ್‍ ರೇಪ್

ಭೋಪಾಲ್: ಕೋಚಿಂಗ್ ಕ್ಲಾಸ್ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ 19 ವರ್ಷದ ಯುವತಿಯನ್ನು ಸೇತುವೆಯ ಕೆಳಗೆ ಎಳೆದುಕೊಂಡು ಹೋಗಿ ಕೈಕಾಲು ಕಟ್ಟಿ ಹಾಕಿ ಆಕೆಯ ಮೇಲೆ ಸತತ 3 ಗಂಟೆಗಳ ಕಾಲ ಗ್ಯಾಂಗ್ ರೇಪ್ ಎಸಗಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.

ಈ ಘಟನೆ ಮಂಗಳವಾರ ಸಂಜೆ ಹಬೀಬ್ ಗಂಜ್ ರೈಲ್ವೇ ನಿಲ್ದಾಣ ಬಳಿ ನಡೆದಿದೆ. ಯುವತಿ ಭೋಪಾಲ್ ನಿಂದ 1 ಕಿ.ಮೀ ದೂರ ವಾಸಿಸುತ್ತಿದ್ದು, ಕೋಚಿಂಗ್ ಕ್ಲಾಸ್ ಮುಗಿದ ನಂತರ ಸಿವಿಲ್ ಸರ್ವಿಸ್ ಪರೀಕ್ಷೆಗೆ ತಯಾರಾಗಲು ದಿನನಿತ್ಯ ರೈಲಿನಲ್ಲಿ ಸಂಚರಿಸುತ್ತಿದ್ದಳು.

ಸಂಜೆ ಸುಮಾರು 7 ಗಂಟೆ ಆಗುತ್ತಿದಂತೆ ಆರೋಪಿ ಗೋಲು ಬಿಹಾರಿ ಎಂಬಾತ ನನ್ನನ್ನು ಎಳೆದುಕೊಂಡು ಹೋಗಲು ಮುಂದಾಗಿದ್ದಾನೆ. ಈ ವೇಳೆ ನಾನು ಹೊಡೆದು ತಪ್ಪಿಸಿಕೊಂಡು ಹೋಗುವಾಗ ಗೋಲು ತನ್ನ ಭಾವ ಅಮರ್ ಗುಂಟುನನ್ನು ಕರೆದಿದ್ದಾನೆ. ಅವರಿಬ್ಬರು ಜೊತೆಯಾಗಿ ಸೇರಿ ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ನನ್ನ ಮೇಲೆ ಕೃತ್ಯ ಎಸಗಿದ್ದಾರೆ ಎಂದು ಯುವತಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಯುವತಿ ಅವರಿಬ್ಬರ ಜೊತೆ ಜಗಳವಾಡುತ್ತಾ, ಹೊಡೆಯುತ್ತಾ ಹಾಗೂ ಕಿರುಚುತ್ತಿದ್ದಾಗ ಅಲ್ಲಿದ್ದ ಒಬ್ಬ ಆರೋಪಿ ಆಕೆಯ ತಲೆಯ ಮೇಲೆ ಕಲ್ಲಿನಿಂದ ಹೊಡೆದಿದ್ದಾನೆ. ನಂತರ ನನ್ನನ್ನು ಕಟ್ಟಿ ಹಾಕಿ ಅತ್ಯಾಚಾರ ಎಸೆಗಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಯುವತಿಯ ಬಟ್ಟೆ ಹರಿದಿದ್ದರಿಂದ ಗೋಲು ಹಾಗೂ ಅವನ ಇಬ್ಬರ ಸ್ನೇಹಿತರ ಜೊತೆ ಸ್ಲಂನಲ್ಲಿರುವ ತನ್ನ ಮನೆಗೆ ಹೋಗಿ ಬಟ್ಟೆಯನ್ನು ತಂದು ಅದನ್ನು ಧರಿಸಲು ಹೇಳಿದ್ದನು. ರಾತ್ರಿ 10 ಗಂಟೆವರೆಗೂ 4 ಜನ ಆರೋಪಿಗಳು ಒಬ್ಬೊಬ್ಬರಾಗಿ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದರು. ನಂತರ ಯುವತಿಗೆ ಬಟ್ಟೆ ಧರಿಸಲು ಹೇಳಿ ಆಕೆಯ ಹತ್ತಿರವಿದ್ದ ಕಿವಿ ಓಲೆ, ವಾಚ್ ಮತ್ತು ಮೊಬೈಲ್ ನನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿ ಹಬೀಬ್ ಗಂಜ್ ರೈಲ್ವೇ ನಿಲ್ದಾಣದಲ್ಲಿರುವ ಪೊಲೀಸ್ ಠಾಣೆಗೆ ಹೋಗಿ ತನ್ನ ಪೋಷಕರನ್ನು ಕರೆ ಮಾಡಿ ತಿಳಿಸಿದ್ದಾಳೆ. ಮರುದಿನ ಯುವತಿಯ ತಂದೆ ಆಕೆಯನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿದ್ದಾಗ, ಸಬ್ ಇನ್ಸ್ ಪೆಕ್ಟರ್ ಒಬ್ಬರು ಇದು ಸಿನಿಮಾ ಕಥೆಯೆಂದು ಹೇಳಿ ಕೇಸ್ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. 11 ಗಂಟೆಯ ಬಳಿಕ ಕೇಸ್ ದಾಖಲಾದ ಹಿನ್ನೆಲೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ.

ಯುವತಿ ಹಬೀಬ್ ಗಂಜ್ ಪೊಲೀಸ್ ಠಾಣೆಯಿಂದ ತನ್ನ ಪೋಷಕರ ಜೊತೆ ಹಿಂತಿರುಗುವಾಗ ಆಕೆಯ ಮೇಲೆ ಅತ್ಯಾಚಾರ ವೆಸಗಿದ ಇಬ್ಬರು ಆರೋಪಿಗಳನ್ನು ಗುರುತಿಸಿದ್ದಳು. ನಂತರ ಆಕೆಯ ಕುಟುಂಬದವರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಯಾಗಿರುವ ಗೋಲು ತನ್ನ ಮಗಳನ್ನು ಕೊಂದು ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದಿದ್ದ.

Comments

Leave a Reply

Your email address will not be published. Required fields are marked *