BBK 11: ತ್ರಿವಿಕ್ರಮ್‌ ಮೇಲೆ ಡಿಪೆಂಡ್‌ ಆಗ್ತೀರಾ ಎಂದ ಮೋಕ್ಷಿತಾ ಮೇಲೆ ಭವ್ಯಾ ಕೆಂಡ

ದೊಡ್ಮನೆಯ (Bigg Boss Kannada 11)  ಆಟ ದಿನದಿಂದ ದಿನಕ್ಕೆ ಸಾಕಷ್ಟು ತಿರುವುಗಳನ್ನು ಪಡೆದು ಮುನ್ನುಗ್ಗುತ್ತಿದೆ. ಮನೆಯ ಪಕ್ಷಪಾತಿ, ಅಶಕ್ತ ಎಂಬ ವಿಚಾರಕ್ಕೆ ಸ್ಪರ್ಧಿಗಳ ನಡುವೆ ಕಿತ್ತಾಟ ಶುರುವಾಗಿದೆ. ಈ ವೇಳೆ, ಉಗ್ರಂ ಮಂಜುಗೆ (Ugramm Manju) ರಜತ್ (Rajath) ಚೀಪ್ ಎಂದು ಕುಟುಕಿದ್ದಾರೆ. ಇತ್ತ ಮೋಕ್ಷಿತಾ (Mokshitha) ಕೂಡ ಭವ್ಯಾ ಮೇಲೆ ಎಗರಾಡಿದ್ದಾರೆ. ಇದನ್ನೂ ಓದಿ:ಸಿನಿಮಾ ಚಾನ್ಸ್‌ಗಾಗಿ ಸೆಕ್ಸ್ ಮಾಡಿದ್ದೀರಾ? ಎಂದವನಿಗೆ ಚೈತ್ರಾ ಆಚಾರ್ ತಿರುಗೇಟು

ಸದ್ಯ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ನನ್ನಿಂದಲೇ ಈ ಟಾಸ್ಕ್ ಗೆಲ್ತು. ನನ್ನಿಂದಲೇ ಈ ಆಟ ಗೆದ್ದರು ಅಂದುಕೊಳ್ಳುವ ಚೀಪ್ ಮೆಂಟಾಲಿಟಿ ಮಂಜಣ್ಣನದ್ದು ಎಂದು ರಜತ್ ಹೇಳಿದ್ದಾರೆ. ರಜತ್ ಮಾತು ಕೇಳಿ, ಮಂಜು ಗರಂ ಆಗಿದ್ದಾರೆ. ನಾನು ಮಾಡಿರೋ ಕೆಲಸನಾ ನಾನೇ ಹೇಳಿಕೊಳ್ಳೋದ್ರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಬಳಿಕ ಬಿಗ್ ಬಾಸ್‌ನ ಟಾಸ್ಕ್ ರೂಲ್ಸ್‌ನಂತೆಯೇ ಸ್ಪರ್ಧಿ ಮಂಜುರನ್ನು ರಜತ್ ನೀರಿಗೆ ತಳ್ಳಿದ್ದಾರೆ.

ಭವ್ಯಾ ಎಲ್ಲರ ಜೊತೆ ಮಿಂಗಲ್ ಆಗೋದಿಲ್ಲ. ನೀವು ತ್ರಿವಿಕ್ರಮ್ ಜೊತೆ ಡಿಪೆಂಡ್ ಆಗ್ತೀರಾ. ತುಂಬಾ ನಿಷ್ಠುರವಾಗಿ ಮಾತಾಡ್ತೀರಾ ಎಂದು ಮೋಕ್ಷಿತಾ ಹೇಳಿದರು. ಮೋಕ್ಷಿತಾರ ಪ್ರತಿ ಮಾತಿಗೂ ಭವ್ಯಾ ತಿರುಗೇಟು ನೀಡಿದ್ದಾರೆ. ನಾನು ಎಲ್ಲರ ಬಳಿ ಹೋಗಿ ಕಷ್ಟ ಸುಖ ಹೇಳಬೇಕಾಗಿಲ್ಲ. ತ್ರಿವಿಕ್ರಮ್ ನನ್ನ ಆಟವನ್ನ ಆಡುತ್ತಿಲ್ಲ. ನಾನು ಈ ಮನೆಗೆ ಸಂಬಂಧಗಳನ್ನು ಬೆಳೆಸಲು ಬಂದಿಲ್ಲ. ಯಾರ ಬಳಿ ಕೂಡ ಸರ್ಟಿಫಿಕೇಟ್ ಬೇಕಿಲ್ಲ ಎಂದು ಭವ್ಯಾ ಕೆಂಡಕಾರಿದ್ದಾರೆ. ಆ ನಂತರ ಭವ್ಯಾರನ್ನು (Bhavya Gowda) ಮೋಕ್ಷಿತಾ ನೀರಿಗೆ ತಳ್ಳಿದ್ದಾರೆ.

ಇನ್ನೂ ಶಿಶಿರ್ ಎಲಿಮಿನೇಷನ್ ಮತ್ತು ಗೋಲ್ಡ್ ಸುರೇಶ್ ನಿರ್ಗಮನದ ನಂತರ ಈ ವಾರಾಂತ್ಯ ಯಾರು ಮನೆಯಿಂದ ಹೊರಬರುತ್ತಾರೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ. ಈ ವಾರ ಡಬಲ್ ಎಲಿಮಿನೇಷನ್ ಆಗುವ ಸಾಧ್ಯತೆಯಿದೆ.