ಹಾಸನ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಎಲ್ಲಿಗೆ ಹೋದರೂ, ಯಾವ ಕೆಲಸವನ್ನು ಮಾಡಬೇಕಾದರೂ ಮೊದಲಿಗೆ ವಾಸ್ತುಶಾಸ್ತ್ರವನ್ನು ನೋಡುತ್ತಾರೆ. ಈಗ ಪತಿಯ ವಾಸ್ತುಶಾಸ್ತ್ರವನ್ನು ಪತ್ನಿ ಭವಾನಿ ರೇವಣ್ಣ ಅವರು ಸಮರ್ಥಿಸಿಕೊಂಡಿದ್ದಾರೆ.
ಭವಾನಿ ರೇವಣ್ಣ ಅವರು ಹೊಳೆನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಶಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ಜನರು ಸಿಕ್ಕಿದರೆ ಸಾಕು ಹೆಚ್.ಡಿ.ರೇವಣ್ಣ ಯಾವಾಗಲೂ ವಾಸ್ತು ಪ್ರಕಾರ ನೋಡುತ್ತಾರೆ ಅಂತ ಬಹುತೇಕರು ಹೇಳುತ್ತಾರೆ. ಮಾಧ್ಯಮಗಳಲ್ಲಿ ವಾಸ್ತು ನೋಡುತ್ತಾರೆ ಎಂದು ಪ್ರಸಾರ ಮಾಡುತ್ತಾರೆ. ಆದರೆ ಅದು ಒಳ್ಳೆಯದಕ್ಕೆ, ನಾನು ತಪ್ಪು ಭಾವಿಸುವುದಿಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ: ಪತಿಯ ಪ್ರತಿಯೊಂದು ಹೆಜ್ಜೆಗೂ ಅರ್ಥ ಕಲ್ಪಿಸಿದ ಭವಾನಿ ರೇವಣ್ಣ

ನಾವು ಎಲ್ಲಿಗಾದರೂ ಕಾಲಿಟ್ಟರೆ ಅದು ಪಾಸಿಟಿವ್ ಎನರ್ಜಿಯಾಗುತ್ತದೆ. ಈಗ ನಾವು ಕಾಲೇಜಿಗೆ ಕಾಲಿಟ್ಟರೆ ಸಾಕು, ಇಲ್ಲಿ ಪ್ರತಿಯೊಬ್ಬರಿಗೂ ಪಾಸಿಟಿವ್ ಎನರ್ಜಿ ಬರುತ್ತದೆ. ರೇವಣ್ಣ ಎಲ್ಲಿಗೆ ಕಾಲಿಟ್ಟರೂ ಅದು ಪಾಸಿಟಿವ್ ಎನರ್ಜಿಯಾಗಿ ಆಗುತ್ತೆ ಎಂದು ಪತಿಯ ವಾಸ್ತುಶಾಸ್ತ್ರವನ್ನ ಹೊಗಳಿ ಭವಾನಿ ರೇವಣ್ಣ ಸಮರ್ಥಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply