ಬೆಂಗಳೂರು: ಬಹುಭಾಷಾ ಚಿತ್ರ ತಾರೆ, ಮಲೆಯಾಳಂ ಬೆಡಗಿ ನಟಿ ಭಾವನಾ ಕನ್ನಡದ ಹುಡುಗ ನವೀನ್ ಅವರ ಜತೆ ದಾಂಪತ್ಯ ಬಾಳಿಗೆ ಕಾಲಿಟ್ಟಿದ್ದಾರೆ.
ಕೇರಳದ ತ್ರಿಶೂರ್ ಜವರ್ ಲಾಲ್ ಕನ್ವೇಷನ್ ಹಾಲ್‍ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಜೋಡಿ ಇದೀಗ ಸಪ್ತಪದಿ ತುಳಿದಿದೆ. ಕೇರಳ ಸಂಪ್ರದಾಯದಂತೆ ಇವರ ಮದುವೆ ನಡೆದಿದ್ದು, ಹಲವು ಸಿನಿಮಾ ತಾರೆಯರು, ಆಪ್ತರು ಹಾಗೂ ಅಭಿಮಾನಿಗಳು ಮದುವೆಯ ಫೋಟೋಗಳನ್ನು ಸಾಮಾಜಿಕ ತಾಣದಲ್ಲಿ ಹಾಕಿ ನವ ಜೋಡಿಗೆ ಶುಭಕೋರುತ್ತಿದ್ದಾರೆ.

ದಕ್ಷಿಣ ಚಿತ್ರರಂಗದ ಈ ವರ್ಷದ ಮೊದಲ ಸಿನಿಮಾ ನಟಿಯ ಮದುವೆ ಇದಾಗಿದೆ. 2017 ಮಾರ್ಚ್ 9ರಂದು ಕೊಚ್ಚಿಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾವನಾ ಮತ್ತು ನವೀನ್ ಕುಟುಂಬದ ಸದಸ್ಯರು ಸೇರಿದಂತೆ ನಟಿಯರಾದ ಮಂಜುವಾರಿಯರ್ ಹಾಗೂ ಸಂಯುಕ್ತವರ್ಮಾ ಪಾಲ್ಗೊಂಡಿದ್ದರು. ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ಜಾಕಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿದ್ದರು. ನಂತರ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ರೋಮಿಯೊ’, ಕಿಚ್ಚ ಸುದೀಪ್‍ನ ಅಭಿನಯದ `ವಿಷ್ಣುವರ್ಧನ್’ ಹಾಗೂ `ಬಚ್ಚನ್’ ಚಿತ್ರಗಳಿಂದ ಭಾವನಾ ಕನ್ನಡಿಗರಿಗೆ ಮನೆ ಮಗಳಾಗಿದ್ದಾರೆ.
https://www.youtube.com/watch?v=A1aJzuyrLiw










Leave a Reply