ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಿ, ಆಗ ಯಾವ ಘಟನೆಯೂ ನಡೆಯಲ್ಲ: ಭಾಸ್ಕರ್ ರಾವ್

ಧಾರವಾಡ: ನೀವು ಪೊಲಿಸರಿಗೆ ಫ್ರೀ ಹ್ಯಾಂಡ್ ಕೊಡಿ, ಆಗ ಇಂತಹ ಯಾವ ಘಟನೆಯೂ ನಡೆಯಲ್ಲ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದರು.

HBL_ POLICE 5

ಹುಬ್ಬಳ್ಳಿ ಗಲಾಟೆ ವಿಚಾರ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶಾಸಕಾಂಗ, ಕಾರ್ಯಾಂಗಕ್ಕೆ ಕೈ ಹಾಕಿದ್ರೆ ಇದೆಲ್ಲ ಆಗುತ್ತದೆ. ಶಾಸಕರು ಹಾಗೂ ಸಚಿವರುಗಳು ತಮಗೇ ಬೇಕಾದ ಪೊಲೀಸ್ ಅಧಿಕಾರಿಗಳನ್ನು ಹಾಕಿಕೊಳ್ಳುತ್ತಾರೆ. ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆಯಾಗಿದೆ. ಆದರೆ ಲಕ್ಷಾಂತರ ರೂಪಾಯಿ ಪಡೆದುಕೊಂಡು ಹಾಕಿಕೊಳ್ಳುತ್ತಾರೆ. ಹಾಗೆ ಬಂದವನ ನಿಷ್ಠೆ ಯಾರಿಗೆ ಇರುತ್ತೆ?. ತನಗೆ ತಂದವರಿಗೆ ಸೆಲ್ಯೂಟ್ ಹೊಡಿತಾ ಇರುತ್ತಾರೆ. ಅಂತಹ ಇನ್ಸ್‍ಪೆಕ್ಟರ್ ಕಮಿಷನರ್ ಮಾತು ಕೇಳ್ತಾನಾ ಎಂದು ಪ್ರಶ್ನಿಸಿದರು.

ಎಂಎಲ್‍ಎ, ಮಿನಿಸ್ಟರ್ ಮನೆ ಕಾಯುತ್ತಾ ಇರುತ್ತಾರೆ. ಇದು ಗಮನ ಬೇರೆ ಸೆಳೆಯುವ ಯತ್ನ. ಸರ್ಕಾರದಲ್ಲಿ ಭ್ರಷ್ಟಾಚಾರ ನಡೀತಾ ಇದೆ. ಇಂತಹುದು ಆದಾಗ ಜನ ಇದನ್ನೇ ಮಾತನಾಡುತ್ತಾರೆ. ಅದನ್ನು ಮರೆತು ಬಿಡ್ತಾರೆ. ಜೋಡಣೆ ಮಾಡುವುದು ಇವರಿಗೆ ಗೊತ್ತಿಲ್ಲ. ವಿಭಜನೆ ಮಾಡುತ್ತಿದ್ದಾರೆ. ಜನರ ಮುಗ್ಧತೆ, ಒಳ್ಳೆತನವೇ ಇವರಿಗೆ ಬಂಡವಾಳ ಆಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ- ಹಲಾಲ್ ಪ್ರಚೋದಿತ ಘಟನೆಯೇ? – ಸಿ.ಟಿ.ರವಿ

HBL_ POLICE 1

ಹುಬ್ಬಳ್ಳಿ ಘಟನೆ ತಡೆಯೋಕೆ ಆಗ್ತಿರಲಿಲ್ಲವಾ ಎಂದು ಪ್ರಶ್ನಿಸಿದ ಅವರು, ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಿ ನೀವು. ಆಗ ಯಾವ ಇಂತಹ ಘಟನೆ ಆಗೋದಿಲ್ಲ. ಪ್ರಚೋದನಕಾರಿ ಹೇಳಿಕೆ ಕೊಡುತ್ತಾರೆ. ಆ ಮೂಲಕ ಎತ್ತಿ ಕಟ್ಟುತ್ತಾರೆ. ಯಡಿಯೂರಪ್ಪ ಹೇಳಿದಂತೆ ನಾವೆಲ್ಲ ಒಂದೇ ತಾಯಿ ಮಕ್ಕಳು. ಒಂದೂವರೆ ವರ್ಷದ ಹಿಂದೆ ಇದೆಲ್ಲ ಇರಲಿಲ್ಲ. ಸರ್ಕಾರಕ್ಕೆ ಸಮಾಜಘಾತುಕ ಶಕ್ತಿಗಳ ಮೇಲಿನ ಹಿಡಿತ ತಪ್ಪಿದೆ ಎಂದು ಭಾಸ್ಕರ್ ರಾವ್ ಕಿಡಿಕಾರಿದರು.

Comments

Leave a Reply

Your email address will not be published. Required fields are marked *