ಡಾ. ಎಂ.ಆರ್ ಕೃಷ್ಣಮೂರ್ತಿ ಅವರ ಶಿಷ್ಯೆ ಜಾಜಿ ರಾಜು ರಂಗ ಪ್ರವೇಶ

ಬೆಂಗಳೂರು: ಪ್ರಖ್ಯಾತ ಭರತನಾಟ್ಯ ಗುರು ಡಾ ಎಂ.ಆರ್ ಕೃಷ್ಣಮೂರ್ತಿ ಅವರ ಶಿಷ್ಯೆ ಜಾಜಿ ರಾಜು ಅವರ ರಂಗಪ್ರವೇಶ ಕಾರ್ಯಕ್ರಮ ಇಂದು ಜಯನಗರದ ಜೆ.ಎಸ್.ಎಸ್ ಸಭಾಂಗಣದಲ್ಲಿ ನಡೆಯಿತು.

ಆದಿಚುಂಚನಗಿರಿ ಮಠದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ರಂಗಪ್ರವೇಶ ಕಾರ್ಯಕ್ರಮದಲ್ಲಿ ಡಾನ್ಸ್ ಹಿಸ್ಟೋರಿಯನ್ ಕರುಣಾ ವಿಜಯೇಂದ್ರ, ನಟರಾಜ ನೃತ್ಯ ಶಾಲಾ ನಿರ್ದೇಶಕಿ ಗುರು ವಸುಂದರಾ ಸಂಪತ್ ಕುಮಾರ್, ಕಂದಾಯ ಸಚಿವ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ, ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದನ್ನೂ ಓದಿ:ರಾಖಿ ಕಟ್ಟಲು ಅಣ್ಣನ ಮನೆಗೆ ಬಂದರು -ಸಹೋದರನ ಜೀವವಿಲ್ಲದ ಕೈಗೆ ರಾಖಿ ಕಟ್ಟುವಂತಾಯ್ತು

ಜಾಜಿ ರಾಜು, ಶ್ರೀಮತಿ ಸುನಿತಾ ಮತ್ತು ಮೋಹನ್ ರಾಜು ಅವರ ಮಗಳು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ನಾಟಕಕಾರ ಬಿ.ಬೋರೇಗೌಡ ಅವರ ಮೊಮ್ಮಗಳು. ಸ್ವತಃ ಭರತನಾಟ್ಯ ಕಲಾವಿದೆ ಆಗಿರುವ ತಮ್ಮ ತಾಯಿ ಸುನಿತಾ ಅವರ ಮಾರ್ಗದರ್ಶನದಲ್ಲಿ ಸಣ್ಣ ವಯಸ್ಸಿನಿಂದಲೇ ಭರತನಾಟ್ಯವನ್ನು ಅಭ್ಯಸಿಸುತ್ತಿದ್ದಾರೆ. ಇದನ್ನೂ ಓದಿ:ನಾಡಗೀತೆ ಸೀಮಿತ- ಭುವನೇಶ್ವರಿ ಭಾವಚಿತ್ರಕ್ಕೊಂದೇ ಸ್ವರೂಪ: ಸುನೀಲ್ ಕುಮಾರ್

Comments

Leave a Reply

Your email address will not be published. Required fields are marked *