ಶ್ರೀಮುರಳಿ ‘ಭರಾಟೆ’ಗೆ ಶುರುವಾಯ್ತು ಕೌಂಟ್‍ಡೌನ್!

ಬೆಂಗಳೂರು: ಸಿನಿಮಾವೊಂದರ ಬಗ್ಗೆ ಬಿಡುಗಡೆಪೂರ್ವದಲ್ಲಿತಯೇ ಸಹಜವಾಗಿ ಹುಟ್ಟಿಕೊಳ್ಳೋ ನಿರೀಕ್ಷೆಗಳ ತೀವ್ರತೆಯಿದೆಯಲ್ಲಾ? ಅದಕ್ಕೆ ಮಾಸ್ಟರ್ ಪೀಸ್‍ನಂಥಾ ಚಿತ್ರಗಳು ಅನೇಕವಿವೆ. ಅದರಲ್ಲಿ ಇತ್ತೀಚಿನ ತಾಜಾ ಉದಾಹರಣೆಯಾಗಿ ನಿಲ್ಲುವಂಥಾ ಚಿತ್ರ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ. ಅಷ್ಟಕ್ಕೂ ಈ ಟೈಟಲ್ಲು ಅನೌನ್ಸ್ ಆಗಿದ್ದ ಘಳಿಗೆಯಿಂದಲೇ ಸೆನ್ಸೇಷನಲ್ ಭರಾಟೆ ಶುರುವಾಗಿ ಹೋಗಿತ್ತು. ರಾಜಸ್ಥಾನದ ಸುಂದರ ಲೊಕೇಷನ್ನುಗಳಲ್ಲಿ, ವಿಭಿನ್ನ ಗೆಟಪ್ಪಿನಲ್ಲಿ ಮಿಂಚಿದ್ದ ರೋರಿಂಗ್ ಸ್ಟಾರ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿ ಬಿಟ್ಟಿದ್ದರು. ಅದೇ ಬಿರುಸಿನೊಂದಿಗೆ ಸಾಗಿ ಬಂದಿರೋ ಭರಾಟೆ ಪ್ರೇಕ್ಷಕರ ಮುಂದೆ ಬರಲು ಕೌಂಟ್ ಡೌನ್ ಶುರುವಾಗಿದೆ.

ಯುವ ಆವೇಗದ ಕಥಾ ಹಂದರದ ಮೂಲಕವೇ ಪ್ರಸಿದ್ಧಿ ಪಡೆದಿರೋ ಚೇತನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಭರಾಟೆ ಕಥೆಯನ್ನಂತೂ ರೋರಿಂಗ್ ಸ್ಟಾರ್ ಶ್ರೀಮುರಳಿಯ ಇಮೇಜಿಗೆ ತಕ್ಕುದಾಗಿಯೇ ಅವರು ಹೊಸೆದಿದ್ದಾರೆ. ಅದಕ್ಕೆ ತಕ್ಕುದಾದಂಥಾ ದೃಶ್ಯ ರೂಪವನ್ನೂ ನೀಡಿದ್ದಾರೆ. ಅದರ ಖದರ್ ಎಂಥಾದ್ದೆಂಬುದು ಈಗಾಗಲೇ ಟೀಸರ್ ಮುಂತಾದವುಗಳೊಂದಿಗೆ ಪ್ರೇಕ್ಷಕರನ್ನು ಮುಟ್ಟಿವೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಡೈಲಾಗ್ ಟ್ರೇಲರ್ ಅಂತೂ ಲಕ್ಷ ಲಕ್ಷ ವೀಕ್ಷಣೆ ಪಡೆಯೋದರೊಂದಿಗೆ ಭರಾಟೆ ಕ್ರೇಜ್ ಮತ್ತಷ್ಟು ಹೆಚ್ಚಿಕೊಂಡಿದೆ.

ಅಷ್ಟಕ್ಕೂ ಸುಪ್ರೀತ್ ನಿರ್ಮಾಣ ಮಾಡಿರೋ ಈ ಚಿತ್ರ ಪ್ರೇಕ್ಷಕರನ್ನು ಆವರಿಸಿಕೊಂಡು ಸಾಗಿ ಬಂದಿರೋದೇ ಇಂಥಾ ಕ್ರಿಯೇಟಿವಿಟಿಯಿಂದ ಕೂಡಿದ ಕೆಲಸ ಕಾರ್ಯಗಳಿಂದ. ರೋರಿಂಗ್ ಸ್ಟಾರ್ ಶ್ರೀಮುರಳಿ ಉಗ್ರಂ ಚಿತ್ರದ ನಂತರದಲ್ಲಿ ಪಕ್ಕಾ ಮಾಸ್ ಇಮೇಜಿಗೆ ಫಿಕ್ಸಾಗಿದ್ದಾರೆ. ಪ್ರೇಕ್ಷಕರೂ ಕೂಡಾ ಅವರನ್ನು ಅಂಥಾದ್ದೇ ಗೆಟಪ್ಪಿನಲ್ಲಿ ಕಾಣಲು ಇಷ್ಟ ಪಡುತ್ತಾರೆ. ಮಫ್ತಿಯಲ್ಲಿಯೂ ಶ್ರೀಮುರಳಿ ಅಂಥಾದ್ದೇ ಪಾತ್ರದಲ್ಲಿ ಮಿಂಚಿದ್ದರು. ಆದರೆ ಭರಾಟೆಯಲ್ಲಿ ಯಾರೂ ನಿರೀಕ್ಷೆ ಮಾಡಿರದಂಥಾ ರಗಡ್ ಪಾತ್ರದಲ್ಲಿ ಮುರಳಿ ಕಾಣಿಸಿಕೊಂಡಿದ್ದಾರೆ. ಅದರ ದರ್ಶನವಾಗಲು ಇನ್ನೊಂದು ವಾರವಷ್ಟೇ ಬಾಕಿ ಉಳಿದುಕೊಂಡಿದೆ.

Comments

Leave a Reply

Your email address will not be published. Required fields are marked *