ಹಲ್ಲಿ ಮೈಮೇಲೆ ಎಸೆದು ಯವತಿಯರ ಅಂಗಾಂಗ ಮುಟ್ಟೋ ಗ್ಯಾಂಗ್ ಬೆಂಗ್ಳೂರಲ್ಲಿದೆ ಎಚ್ಚರ!

ಬೆಂಗಳೂರು: ಯುವತಿಯರೇ ಎಚ್ಚರ. ನೀವು ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುತ್ತೀರಿ ಎಂದರೆ ಸ್ವಲ್ಪ ಎಚ್ಚರದಿಂದಿರಿ. ಯುವತಿಯರ ಮೇಲೆ ದೌರ್ಜನ್ಯವೆಸಗಲು ಬೆಂಗಳೂರಿನಲ್ಲಿ ಯುವಕರು ಹೊಸ ಟೆಕ್ನಿಕ್ ಬಳಸುತ್ತಿದ್ದಾರೆ.

ತಮ್ಮ ವಾಂಛೆ ತೀರಿಸಿಕೊಳ್ಳಲು ಯುವಕರು ಯುವತಿಯರ ಮೇಲೆ ಹಲ್ಲಿಯನ್ನು ಎಸೆಯುತ್ತಾರೆ. ಬಳಿಕ ಅದನ್ನು ತೆಗೆಯುವ ನೆಪದಲ್ಲಿ ಬಂದು ಅಂಗಾಂಗ ಮುಟ್ಟಿ ಕಿರುಕುಳ ಕೊಟ್ಟಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆಗಿದ್ದೇನು?: ಬಿಹಾರ ಮೂಲದ ಯುವತಿಯೊಬ್ಬಳು ಬೆಂಗಳೂರಿಗೆ 15 ದಿವಸದ ಟ್ರೈನಿಂಗ್ ಗೆಂದು ಆಗಮಿಸಿದ್ದಾಳೆ. ಎರಡು ದಿನಗಳ ಹಿಂದೆ ಇಂದಿರಾನಗರದ ಸಿಎಂಎಚ್ ರಸ್ತೆಯಲ್ಲಿರುವ ಕಚೇರಿಯಲ್ಲಿ ಯುವತಿ ಟ್ರೈನಿಂಗ್ ಮುಗಿಸಿ ತಾನು ವಾಸವಿದ್ದ ಕಡೆ ಹೊರಟಿದ್ದಾಳೆ. ಈ ವೇಳೆ ರಸ್ತೆ ಬದಿಯಲ್ಲಿದ್ದ ಟೀ ಶಾಪ್ ಬಳಿ ಬಂದಾಗ ಕಾಮುಕರ ಗುಂಪು ಯುವತಿಯ ಮೇಲೆ ಹಲ್ಲಿಯನ್ನು ಎಸೆದಿದ್ದಾರೆ. ಬಳಿಕ ಅದೇ ಹಲ್ಲಿಯನ್ನು ತೆಗೆಯುವ ನೆಪದಲ್ಲಿ ಈ ಗುಂಪು ಯುವತಿಯ ಅಂಗಾಂಗಗಳನ್ನು ಮುಟ್ಟಿ ಕಿರುಕುಳ ನೀಡಿದ್ದಾರೆ.

ಘಟನೆ ನಡೆದ ಬಳಿಕ ಯುವತಿ ಇಂದಿರಾನಗರ ಪೊಲೀಸರಿಗೆ ದೂರು ನೀಡಿದ್ದಾಳೆ. ಐಪಿಸಿ ಸೆಕ್ಷನ್ 354ರ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಪೊಲೀಸರು ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ವೀಡಿಯೋ ವಶಪಡಿಸಿಕೊಂಡಿದ್ದು ಇದರ ನೆರವಿನಿಂದ ಆರೋಪಿಗಳನ್ನು ಹುಡುಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ದೂರು ನೀಡಿದ ಯುವತಿ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

Comments

Leave a Reply

Your email address will not be published. Required fields are marked *