ಭುವನೇಶ್ವರ: ಕೆಲಸಕ್ಕೆ ಹೋಗುತ್ತಿದ್ದ ತಂದೆಯ ಕಾಲು ಹಿಡಿದು ಹೋಗಬೇಡ ಎಂದು ಮಗ ಅತ್ತು ಗೋಗರೆಯುತ್ತಿರುವ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪೊಲೀಸ್ ಅಧಿಕಾರಿ ಅರುಣ್ ಬೋತ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, “ಪೊಲೀಸ್ ವೃತ್ತಿಯಲ್ಲೇ ಇದು ತುಂಬಾ ಭಾವುಕವಾದ ಕ್ಷಣ. ಏಕೆಂದರೆ ಕಷ್ಟದ ಸಮಯದಲ್ಲೂ ಪೊಲೀಸರು ಇಂತಹ ಕ್ಷಣಗಳನ್ನು ಎದುರಿಸಬೇಕಾಗುತ್ತದೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಮಗ ತನ್ನ ತಂದೆಯ ಕಾಲು ಹಿಡಿದುಕೊಂಡು ಕೆಲಸಕ್ಕೆ ಹೋಗಬೇಡ ಎಂದು ಜೋರಾಗಿ ಅಳುತ್ತಿದ್ದಾನೆ. ತಂದೆ ಕೂಡ ನಾನು ಬೇಗ ಹಿಂತಿರುಗುತ್ತೇನೆ ಎಂದು ಸಮಾಧಾನಪಡಿಸಲು ಮುಂದಾಗುತ್ತಾರೆ. ಆದರೆ ತಂದೆಯ ಮಾತನ್ನು ಕೇಳದ ಬಾಲಕ ಅವರ ಕಾಲನ್ನು ಹಿಡಿದುಕೊಂಡು ಜೋರಾಗಿ ಅತ್ತಿದ್ದಾನೆ.

ಈ ವಿಡಿಯೋ 1 ನಿಮಿಷ 25 ಸೆಕೆಂಡ್‍ಗಳಿದ್ದು, ನೋಡುವವರ ಮನ ಕರಗುವಂತೆ ಮಾಡುತ್ತಿದೆ. ಕೆಲವರು ಈ ವಿಡಿಯೋ ನೋಡಿ ಅಪ್ಪ- ಮಗನ ಬಾಂಧವ್ಯ ನೋಡಿ ಸಂತಸಪಟ್ಟರೆ, ಮತ್ತೆ ಕೆಲವರು ಈ ವಿಡಿಯೋ ನೋಡಿ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.
ಸದ್ಯ ಈ ವೈರಲ್ ವಿಡಿಯೋ 1 ಲಕ್ಷಕ್ಕೂ ಅಧಿಕ ವ್ಯೂ ಪಡೆದಿದೆ. ಅಲ್ಲದೆ 15 ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ 5 ಸಾವಿರಕ್ಕೂ ಹೆಚ್ಚು ರೀ-ಟ್ವೀಟ್‍ಗಳು ಪಡೆದುಕೊಂಡಿದೆ.
https://twitter.com/arunbothra/status/1122326391620427777?ref_src=twsrc%5Etfw%7Ctwcamp%5Etweetembed%7Ctwterm%5E1122326391620427777&ref_url=https%3A%2F%2Fwww.punjabkesari.in%2Fnational%2Fnews%2Fthe-police-shared-the-son-with-the-emotional-video-987841

Leave a Reply