ಹಿಜಬ್ ಧರಿಸಿ ಪರೀಕ್ಷಾ ಕೆಲಸಕ್ಕೆ ಹಾಜರಾಗಿದ್ದ ಶಿಕ್ಷಕಿಯನ್ನು ವಾಪಸ್ ಕಳುಹಿಸಿದ ಬಿಇಓ

ಬೆಂಗಳೂರು: ಹಿಜಬ್ ಧರಿಸಿ ಪರೀಕ್ಷಾ ಕೆಲಸಕ್ಕೆ ಹಾಜರಾಗಿದ್ದ ಶಿಕ್ಷಕಿಯನ್ನು ವಾಪಸ್ ಕಳಿಸಿರುವ ಘಟನೆ ರಾಜಾಜಿನಗರದಲ್ಲಿ ನಡೆದಿದೆ.

ರಾಜಾಜಿನಗರದ ಶಾಲಾ ಕೇಂದ್ರದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯುತ್ತಿತ್ತು. ಹಿಜಬ್ ಧರಿಸಿ ಪರೀಕ್ಷಾ ಕೆಲಸಕ್ಕೆ ಹಾಜರಾಗಿದ್ದ ಶಿಕ್ಷಕಿಯನ್ನು ಬಿಇಓ ವಾಪಸ್ ಕಳುಹಿಸಿದ್ದಾರೆ.

ಪಬ್ಲಿಕ್ ಟಿವಿಗೆ ಜೊತೆಗೆ ಮಾತನಾಡಿದ ಬಿಇಓ ರಮೇಶ್, ಶಿಕ್ಷಕಿಯೊಬ್ಬರು ಹಿಜಬ್ ಧರಿಸಿಕೊಂಡು ಬಂದ ಹಿನ್ನೆಲೆ ಪರೀಕ್ಷಾ ಕೆಲಸದಿಂದ ಬಿಡುಗಡೆ ಮಾಡಿ ಕಳಿಸಿಸಲಾಗಿದೆ. ಶಿಕ್ಷಕಿಯನ್ನ ಅಮಾನತು ಮಾಡಿಲ್ಲ. ಪರೀಕ್ಷಾ ಕೆಲಸದಿಂದ ಬಿಡುಗಡೆ ಮಾಡಿ ಕಳಿಸಲಾಗಿದೆ ಎಂದು ಹೇಳಿದ್ದಾರೆ.

ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸರ್ಕಾರ ಸಮವಸ್ತ್ರ ನಿಯಮ ಕಡ್ಡಾಯ ಮಾಡಿದೆ. ಎಕ್ಸಾಂಗೆ ಹಿಜಬ್ ನಿಷೇಧ ಮಾಡಿದೆ. ಹೈಕೋರ್ಟ್ ಆದೇಶದ ಮೇಲೆ ಹಿಜಬ್ ಸೇರಿದಂತೆ ಯಾವುದೇ ಧಾರ್ಮಿಕ ಭಾವನೆ ವಸ್ತ್ರಗಳಿಗೆ ಅವಕಾಶ ಇಲ್ಲ. ಸರ್ಕಾರಿ ಶಾಲಾ ಮಕ್ಕಳು ಸರ್ಕಾರ ನಿಗದಿ ಮಾಡಿದ ಸಮವಸ್ತ್ರ ಧರಿಸೋದು ಕಡ್ಡಾಯ ಮಾಡಿದೆ.

ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಆಯಾ ಶಾಲಾ ಆಡಳಿತ ಮಂಡಳಿ ನಿಗದಿ ಪಡಿಸಿದ ಸಮವಸ್ತ್ರ ಧರಿಸಿಕೊಂಡು ಬರೋದು ಕಡ್ಡಾಯವಾಗಿದೆ. ಹಿಜಬ್ ಧರಿಸಿ ಬಂದ್ರೆ ಎಕ್ಸಾಂ ಬರೆಯಲು ಅವಕಾಶ ಇಲ್ಲ. ಇದೇ ಕಾರಣಕ್ಕೆ ಎಕ್ಸಾಂ ಗೈರಾದ್ರೆ ವಿಶೇಷ ಪರೀಕ್ಷೆಗೆ ಅವಕಾಶ ಇಲ್ಲ. ಮತ್ತೆ ಪೂರಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದೆ. ಆದರೆ ಕೆಲವು ವಿದ್ಯಾರ್ಥಿಗಳು ಮಾತ್ರ ಹಿಜಬ್ ತೆಗೆದು ಪರೀಕ್ಷೆಗೆ ಹಾಜರಾದರೆ ಇನ್ನು ಕೆಲವರು ಪರೀಕ್ಷಾ ಕೇಂದ್ರದಿಂದ ಮನೆಗೆ ವಾಪಸ್ ಆಗಿರುವ ಘಟನೆಗಳು ಕೇಳಿಬಂದಿದೆ.

Comments

Leave a Reply

Your email address will not be published. Required fields are marked *