ಅಂತರ್ಜಾತಿ ವಿವಾಹಕ್ಕೆ ಪೋಷಕರ ಅಡ್ಡಿ – ಫೇಸ್‍ಬುಕ್ ಲೈವ್ ಬಂದು ಯುವಜೋಡಿ ಆತ್ಮಹತ್ಯೆ

ಬೆಂಗಳೂರು: ಅಂತರ್ಜಾತಿ ವಿವಾಹವಾದ ಯುವಜೋಡಿಯೊಂದು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಚಿಕ್ಕಮಂಗಳೂರಿನ ಮೂಡಿಗೆರೆಯಲ್ಲಿ ನಡೆದಿದೆ.

ಬೆಂಗಳೂರಿನ ಗೋರಿಪಾಳ್ಯ ಮೂಲದ ರಕ್ಷಿತಾ (19) ಹಾಗೂ ಶೇಷಾದ್ರಿ (20) ಪರಸ್ಪರ ಪ್ರೀತಿಸಿ ಹಿರಿಯರ ವಿರೋಧ ಲೆಕ್ಕಿಸದೇ ಇತ್ತೀಚಿಗೆ ಮದುವೆಯಾಗಿದ್ದರು. ಆದರೆ ಮೇಲ್ಜಾತಿಗೆ ಸೇರಿದ ರಕ್ಷಿತಾ ಪೋಷಕರು ಇಬ್ಬರಿಗೆ ಕಿರುಕುಳ ನೀಡಿದ್ದು, ಕೊಲೆ ಮಾಡುವ ಬೆದರಿಕೆ ಹಾಕಿದ್ದರು. ಇದರಿಂದ ಮನನೊಂದ ಪ್ರೇಮಿಗಳು ಅವರು ಕೊಲೆ ಮಾಡುವ ಮುನ್ನ ನಾವೇ ಸಾಯುತ್ತೇವೆ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮ ಹತ್ಯೆಗೂ ಮುನ್ನ ಮುನ್ನ ಫೇಸ್ ಬುಕ್‍ನಲ್ಲಿ ಲೈವ್ ಮಾಡಿರುವ ಇಬ್ಬರು ತಮ್ಮ ಕಷ್ಟ ತಿಳಿಸಿ ಸಾಯುತ್ತಿರುವುದಾಗಿ ಹೇಳಿದ್ದಾರೆ. ನಾವು ಪ್ರೀತಿ ಮಾಡಿರುವುದಿಂದ ನಮ್ಮ ಮನೆಯಲ್ಲಿ ತೊಂದರೆ ಆಗುತ್ತಿದ್ದು, ಇದರಲ್ಲಿ ನಮ್ಮ ತಪ್ಪೇನು ಇಲ್ಲ. ಎಲ್ಲವೂ ನಡೆದು ಹೋಯಿತು. ನಾವು ಬೇಕು ಎಂದು ಏನು ಮಾಡಿಲ್ಲ. ಯಾರಿಗೂ ಅವಮಾನ ಮಾಡಿಲ್ಲ. ನಮ್ಮಿಂದ ಕುಟುಂಬಕ್ಕೆ ತೊಂದರೆ ಆಗುವುದು ಬೇಡ ಎಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.

ಶೇಷಾದ್ರಿ ಯುವತಿಯ ಕುಟುಂಸ್ಥರ ಮೇಲೆ ಆರೋಪ ಮಾಡಿದ್ದು, ನಮ್ಮ ಜಾತಿ ಬೇರೆ ಆಗಿದ್ದೆ ಇದಕ್ಕೆಲ್ಲಾ ಕಾರಣ. ನಮಗೇ ಬದುಕಲು ಇಷ್ಟ ಇದ್ದು, ರವಿಚನ್ನಣ್ಣನವರ್ ಸರ್ ರನ್ನು ಭೇಟಿ ಮಾಡಲು ತೀರ್ಮಾನಿಸಿದ್ದೇವು. ಆದರೆ ಅವರನ್ನು ಭೇಟಿ ಮಾಡುವ ಮುನ್ನವೇ ಇವರು ನಮ್ಮನ್ನು ಸಾಯಿಸುತ್ತಾರೆ. ಅವರ ಕೈಯಲ್ಲಿ ಸಾಯುವುದು ಬೇಡ ಎಂದು ನಾವೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಪೊಲೀಸರು ಪ್ರತಿ ದಿನ ನಮ್ಮ ತಂದೆಯವರನ್ನು ಕರೆದುಕೊಂಡು ಹೋಗಿತ್ತಿದ್ದಾರೆ. ಇದರಿಂದ ನಮ್ಮ ತಂದೆ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ನನಗೆ ತಂಗಿ, ಅಮ್ಮ ಇದ್ದು ಅವರ ಭವಿಷ್ಯ ಏನಾಗುತ್ತೆ? ಇದಕ್ಕೆಲ್ಲಾ ನೀವೇ ಕಾರಣರಾಗಿದ್ದು, ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟುಕೊಳ್ಳಿ ಎಂದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *