ಪ್ರಿಯಕರನೊಂದಿಗೆ ಸರಸಕ್ಕೆ ಅಡ್ಡಿಯಾದ ಪತಿ – ಕ್ಷಣಮಾತ್ರದಲ್ಲೇ ಸ್ಕೆಚ್‌ ಹಾಕಿ ಪ್ರಿಯಕರನಿಂದ್ಲೇ ಕೊಲೆ ಮಾಡಿಸಿದ್ಲು ಪತ್ನಿ

ಬೆಂಗಳೂರು: ಶಬರಿಮಲೆ (Sabarimala) ಅಯ್ಯಪ್ಪನ ದರ್ಶನ ಮುಗಿಸಿ ಮನೆಗೆ ಹೋಗದೇ ಅಯ್ಯಪ್ಪನ ಸನ್ನಿದಿಯಿಂದ ನೇರವಾಗಿ ಪ್ರೇಯಸಿಯನ್ನ ನೋಡಲು ಬೆಂಗಳೂರಿಗೆ (Bengaluru) ಬಂದಿದ್ದ ಪ್ರೀಯಕರ, ಇದೀಗ ಪ್ರೇಯಸಿಯೊಂದಿಗೆ ಜೈಲುಪಾಲಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೌದು. ಶಬರಿಮಲೆ ಅಯ್ಯಪ್ಪನ ದರ್ಶನ ಮುಗಿಸಿ ಬಂದಿದ್ದ ಪ್ರಿಯಕರನೊಂದಿಗೆ (Lover) ಸರಸವಾಡಲು ಪತಿ ಅಡ್ಡಿಯಾಗಿದ್ದಾನೆ. ಇದರಿಂದ ಆಕ್ರೋಶಗೊಂಡ ಪತ್ನಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿಸಿದ್ದಾಳೆ. ಪತಿ ವೆಂಕಟನಾಯ್ಕ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿಸಿದ್ದಾಳೆ. ಬಳಿಕ ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಿ ಬಾತ್ ರೂಂನಲ್ಲಿ ನನ್ನ ಗಂಡ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ ಅಂತ ಪೊಲೀಸರ ಮುಂದೆ ಹೈಡ್ರಾಮಾ ಮಾಡಿದ್ದಾಳೆ.

ಹೆಚ್‌ಎಸ್‌ಆರ್ ಲೇಔಟ್‌ನ (HSR Layout) ನಿವಾಸಿ ಅಗಿರುವ ಆರೋಪಿ ನಂದಿನಿ ಬಾಯಿ ಇದೇ ಜನವರಿ 9ರಂದು ಶಬರಿ ಮಲೆಯಿಂದ ಬಂದಿದ್ದ ಪ್ರಿಯಕರನನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾಳೆ. ಪತಿ ಇಲ್ಲದ್ದನ್ನು ಗಮನಿಸಿ ಪ್ರಿಯಕರನೊಂದಿಗೆ ಸರಸ ಸಲ್ಲಾಪದಲ್ಲಿ ಮಗ್ನಳಾಗಿದ್ದಳು. ಆದ್ರೆ ಅದೇ ಸಮಯಕ್ಕೆ ಪತಿ ವೆಂಕಟನಾಯ್ಕ್ ಎಂಟ್ರಿ ಕೊಟ್ಟಿದ್ದಾನೆ. ಪತಿಯ ದಿಢೀರ್ ಆಗಮನದಿಂದ ಕಂಗಾಲಾದ ನಂದಿನಿ ಪ್ರೀಯಕರನೊಂದಿಗೆ ಸೇರಿ ತಕ್ಷಣವೇ ಸ್ಕೆಚ್‌ ಹಾಕಿ ಕೊಲೆ ಮಾಡಿಸಿದ್ದಾಳೆ. ಪೊಲೀಸರಿಗೆ ಕೊಲೆ ಎಂದು ಗೋತ್ತಾಗದಂತೆ ಬಾತ್ ರೂಂನಿಂದ ಬಿದ್ದು ಸಾವನ್ನಪ್ಪಿದ್ದಾನೆ ಅನ್ನೋ ರೀತಿಯಲ್ಲಿ ಸೀನ್ ಕ್ರಿಯೇಟ್ ಮಾಡಿದ್ದಾಳೆ. ಇದನ್ನೂ ಓದಿ: ಸಂಸತ್ ದಾಳಿ: ಮೈಸೂರಿನ ಮನೋರಂಜನ್‌ ಸೇರಿ ಐವರಿಗೆ ಮಂಪರು ಪರೀಕ್ಷೆ

ಮರಣೋತ್ತರ ಪರೀಕ್ಷೆಗೆ ಮೃತದೇಹ ತಗೆದುಕೊಂಡು ಹೋದಾಗ ಇದು ಸಹಜ ಸಾವಲ್ಲ, ಕೊಲೆ ಅನ್ನೋ ಅನುಮಾನ ಪೊಲೀಸರಿಗೆ ಮೂಡಿದೆ. ಕೂಡಲೇ ಹೆಚ್‌ಎಸ್‌ಆರ್ ಲೇಔಟ್ ಪೊಲೀಸರು ಪತ್ನಿ ನಂದಿನಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಅಲ್ಲಿಯೂ ನನ್ನ ಗಂಡನ ಸಾವಿನಿಂದ ನಾನು ಹುಚ್ಚಿಯಾಗಿದ್ದೀನಿ. ನನಗೆ ನನ್ನ ಗಂಡ ಬೇಕು ಎಂದು ಒಂದೇ ಸಮನೇ ಪೊಲೀಸರ ಮುಂದೆ ಹೈಡ್ರಾಮಾ ಮಾಡಿದ್ದಾಳೆ. ಆದ್ರೆ ಇದ್ಯಾವುದಕ್ಕೂ ಜಗ್ಗದೇ ಪೊಲೀಸರು ವಿಚಾರಣೆ ಮುಂದುವರಿಸಿದ್ದು, ನಂತರ ತಪ್ಪೊಪ್ಪಿಕೊಂಡಿದ್ದಾಳೆ. ಇದನ್ನೂ ಓದಿ: ಬೆಂಗಳೂರಿನ ರೇಸ್‌ಕೊರ್ಸ್ ಬುಕ್ಕಿಂಗ್‌ ಕೌಂಟರ್‌ ಮೇಲೆ CCB ದಾಳಿ – 3.47 ಕೋಟಿ ರೂ. ಸೀಜ್

ಸದ್ಯ ಆರೋಪಿ ನಿತೀಶ್ ಕುಮಾರ್‌ನನ್ನ ಬಂಧಿಸಿ ಪೊಲೀಸರು ತನಿಖೆ ಮಾಡಿದ್ದಾರೆ. ನಂದಿನಿ ಹಾಗೂ ಪ್ರಿಯಕರ ಇಬ್ಬರೂ ಆಂಧ್ರಪ್ರದೇಶ ಮೂಳದವರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಹುಟ್ಟು ಮುಸ್ಲಿಂ ಆಗದಿದ್ರೂ, ಟೋಪಿ ಹಾಕಿದಾಗ ಒರಿಜಿನಲ್‌ ಮುಸ್ಲಿಂ ಥರ ಕಾಣ್ತಾರೆ: ಸಿ.ಟಿ.ರವಿ