ಬೆಂಗಳೂರು: ಇಂದು ನಗರದಲ್ಲಿ ಹಾಡುಹಗಲೇ ಉದ್ಯಮಿಯೊಬ್ಬರ ಕಾರಿನ ಗ್ಲಾಸ್ ಒಡೆದು 3.5 ಲಕ್ಷ ರೂ. ಹಣ ದೋಚಿರುವ ಘಟನೆ ಕೊಡಿಗೆಹಳ್ಳಿಯಲ್ಲಿ ನಡೆದಿದೆ.
ಬಾಬು ಎಂಬವರೇ ಹಣ ಕಳೆದುಕೊಂಡ ಉದ್ಯಮಿ. ಬಾಬು ಅವರು ಇಂದು ಸಹಕಾರ ನಗರದ ಎಕ್ಸಿಸ್ ಬ್ಯಾಂಕ್‍ನಲ್ಲಿ ಮೂರುವರೆ ಲಕ್ಷ ರೂ. ಹಣವನ್ನು ಡ್ರಾ ಮಾಡಿದ್ದರು. ಬ್ಯಾಂಕಿನಿಂದ ಹಣ ತೆಗೆದುಕೊಂಡು ತಮ್ಮ ಕಾರಿನಲ್ಲಿ ಹಿಂದುರುಗಿದ್ದರು. ಈ ವೇಳೆ ಕೊಡಿಗೆಹಳ್ಳಿಯಲ್ಲಿ ಟೀ ಕುಡಿಯಲು ಕಾರು ನಿಲ್ಲಿಸಿ ಹೋಟೆಲ್ ನತ್ತ ಬಾಬು ತೆರಳಿದ್ದಾರೆ.
ಈ ವೇಳೆ ಬೈಕಿನಲ್ಲಿ ಬಂದ ಐವರು ಕಾರಿನ ಗ್ಲಾಸ್ ಒಡೆದು ಹಣದೊಂದಿಗೆ ಪರಾರಿಯಾಗಿದ್ದಾರೆ. ದರೋಡೆಯ ಕೆಲವು ದೃಶ್ಯಗಳು ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.youtube.com/watch?v=joAMsQy5Dzk




Leave a Reply