ಸಂಸದೆ ಸುಮಲತಾ ಅಂಬರೀಶ್ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅವರಿಗೆ ನಕಲಿ ಫೇಸ್‍ಬುಕ್ ಖಾತೆಗಳ ಸಮಸ್ಯೆ ಎದುರಾಗಿದ್ದು, ಈ ಕುರಿತು ಅವರು ಸೈಬರ್ ಕ್ರೈಂ ವಿಭಾಗದ ಮೊರೆ ಹೋಗಿದ್ದಾರೆ.

ನಕಲಿ ಫೇಸ್‍ಬುಕ್ ಖಾತೆಗಳ ಕುರಿತು ಟ್ವಿಟ್ಟರ್ ಹಾಗೂ ಫೇಸ್‍ಬುಕ್ ನಲ್ಲಿ ಮಾಹಿತಿ ನೀಡಿ ಪೋಸ್ಟ್ ಮಾಡಿರುವ ಅವರು, ನನ್ನ ಹೆಸರಿನಲ್ಲಿ ಹಲವಾರು ನಕಲಿ ಫೇಸ್‍ಬುಕ್ ಖಾತೆಗಳನ್ನು ರಚಿಸಲಾಗಿದೆ ಎಂದು ನನ್ನ ಗಮನಕ್ಕೆ ತರಲಾಗಿದೆ. ಸೈಬರ್ ಅಪರಾಧ ಶಾಖೆಯ ಸಹಾಯದಿಂದ ಈ ಕಿಡಿಗೇಡಿ ತನದವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದು ನನ್ನ ಸ್ನೇಹಿತರಿಗಾಗಿ ಪರಿಶೀಲಿಸಿದ ಫೇಸ್‍ಬುಕ್ ಖಾತೆಯಾಗಿದೆ ಮತ್ತು ನನ್ನ ಸದಸ್ಯರೊಂದಿಗೆ ಸಂವಹನ ನಡೆಸುವ ಇನ್ನೊಂದು ಅಧಿಕೃತ ಪುಟವನ್ನು ಮಾತ್ರ ಹೊಂದಿದ್ದೇನೆ ಎಂದು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

ಇದೇ ವೇಳೆ ತಮ್ಮ ಅಧಿಕೃತ ಫೇಸ್‍ಬುಕ್ ಖಾತೆಗಳ ಲಿಂಗ್ ಶೇರ್ ಮಾಡಿರುವ ಅವರು, ಯಾವುದೇ ಅನಧಿಕೃತ ಪುಟವನ್ನು ಯಾರಾದರೂ ಗಮನಿಸಿದರೆ ದಯವಿಟ್ಟು ಅದನ್ನು ತಕ್ಷಣ ವರದಿ ಮಾಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಕೆಲ ನಕಲಿ ಖಾತೆಗಳ ಸ್ಕ್ರೀನ್ ಶರ್ಟ್‍ಗಳನ್ನು ಪೋಸ್ಟ್ ಮಾಡಿ ಜಾಗೃತಿ ಮೂಡಿಸಿದ್ದಾರೆ. ಅಲ್ಲದೇ ನಕಲಿ ಖಾತೆ ಬಳಕೆ ಮಾಡುವವರಿಗೆ ಶಿಕ್ಷೆಯಾಗಲಿದೆ ಎಂದು ಸೈಬರ್ ಕ್ರೈಂ ವಿಭಾಗದ ಗಮನಕ್ಕೂ ತಂದಿದ್ದಾರೆ.

Comments

Leave a Reply

Your email address will not be published. Required fields are marked *