ತನಿಖೆ ದಾರಿ ತಪ್ಪಿಸಲು ಮಂಗಳೂರು ಗಲಭೆಯ ಆಯ್ದ ವಿಡಿಯೋಗಳನ್ನ ಬಿಡುಗಡೆ ಮಾಡಿದ್ದಾರೆ: ಸಿದ್ದು

ಬೆಂಗಳೂರು: ಮಂಗಳೂರು ಪೊಲೀಸರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಡಿಸೆಂಬರ್ 19ರಂದು ನಡೆದ ಪ್ರತಿಭಟನೆಯ ಫೋಟೋ ಮತ್ತು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಮಂಗಳೂರು ಪೊಲೀಸರು ಬಿಡುಗಡೆ ಮಾಡಿರುವ ವಿಡಿಯೋ, ಫೋಟೋಗಳ ಬಗ್ಗೆ ಭಾರಿ ಚರ್ಚೆ ಆರಂಭವಾಗಿದೆ.

ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು ಮಂಗಳೂರು ಗಲಭೆಯ ಆಯ್ದ ವಿಡಿಯೋಗಳನ್ನು ಪೊಲೀಸರು ಸೋರಿಕೆ ಮಾಡಿ, ತನಿಖೆಯ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ತಮ್ಮಲ್ಲಿರುವ ಸಾಕ್ಷ್ಯಗಳನ್ನು ಮೊದಲು ತನಿಖಾಧಿಕಾರಿಗಳಿಗೆ ಒಪ್ಪಿಸಬೇಕಿತ್ತು. ಈ ಕಾರಣಕ್ಕಾಗಿಯೇ ಸಿಐಡಿ ತನಿಖೆ ಒಂದು ನಾಟಕ ಎಂದು ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.

ಈ ವಿಚಾರವಾಗಿ ಎರಡು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಮಂಗಳೂರು ಗಲಭೆಯ ಆಯ್ದ ವಿಡಿಯೋಗಳನ್ನು ಪೊಲೀಸರು ಸೋರಿಕೆ ಮಾಡಿ, ತನಿಖೆಯ ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ತಮ್ಮಲ್ಲಿರುವ ಸಾಕ್ಷ್ಯಗಳನ್ನು ಮೊದಲು ತನಿಖಾಧಿಕಾರಿಗಳಿಗೆ ಒಪ್ಪಿಸಬೇಕಿತ್ತು. ಈ ಕಾರಣಕ್ಕಾಗಿಯೇ ಸಿಐಡಿ ತನಿಖೆ ಒಂದು ನಾಟಕ, ಅದರ ಬದಲಿಗೆ  ನ್ಯಾಯಾಂಗ ತನಿಖೆ ಮಾಡಿ ಎಂದು ನಾನು ಒತ್ತಾಯಿಸಿದ್ದು ಎಂದು ಟ್ವೀಟ್ ಮಾಡಿದ್ದಾರೆ.

ಇದರ ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಮಂಗಳೂರು ಗಲಭೆಯ ತಪ್ಪಿತಸ್ಥರು ಯಾರೇ ಇರಲಿ, ತನಿಖೆ ನಡೆಸಿ ಅವರನ್ನು ಶಿಕ್ಷೆಗೊಳಪಡಿಸಬೇಕು. ಆದರೆ ಆಯ್ದ ವಿಡಿಯೋಗಳನ್ನು ಲೀಕ್ ಮಾಡಿ ಅದರ ಮೂಲಕ ಒಂದು ಧರ್ಮದ ಜನರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಸಲ್ಲದು. ಶಾಂತಿ-ಸೌಹಾರ್ದತೆ ಕಾಪಾಡಬೇಕಾಗಿರುವ ಪೊಲೀಸರೇ ಸೌಹಾರ್ದ ಕೆಡಿಸುವ ಕೆಲಸ ಮಾಡುತ್ತಿರುವುದು ಸರಿ ಅಲ್ಲ ಎಂದು ಹೇಳಿದ್ದಾರೆ.

ಈಗಾಗಲೇ ಎನ್.ಆರ್.ಸಿ ಹಾಗೂ ಸಿಎಎ ಜಾರಿಯಿಂದ ಮಂಗಳೂರಿನಲ್ಲಿ ಆಗಿರುವ ಪ್ರತಿಭಟನೆ ಮತ್ತು ಗೋಲಿಬಾರ್ ಪ್ರಕರಣವನ್ನು ಮುಖ್ಯಮಂತ್ರಿಗಳು ಸಿಐಡಿ ತನಿಖೆಗೆ ಆದೇಶಿದ್ದಾರೆ. ಆದರೆ ಸಿದ್ದರಾಮಯ್ಯನವರು ಸಿಐಡಿ ತನಿಖೆಯನ್ನು ವಿರೋಧಿಸಿದ್ದು, ಸಿಐಡಿ ತನಿಖೆ ಎನ್ನುವುದು ನಾಟಕ ಅದರ ಬದಲು ನ್ಯಾಯಾಂಗ ತನಿಖೆ ಮಾಡಿ ಎಂದು ಅವರು ಒತ್ತಾಯಿಸಿದ್ದರು.

ಈಗಾಗಲೇ ಪೋಲಿಸರು ವಿಡಿಯೋ ಬಿಡುಗಡೆ ಮಾಡಿರುವುದರ ಬಗ್ಗೆ ಪ್ರತಿಪಕ್ಷದ ನಾಯಕರು, ಶಾಸಕರು ಹೇಳಿಕೆ ನೀಡುತ್ತಿದ್ದು, ಈ ಕುರಿತು ಪ್ರಶ್ನೆ ಮಾಡ್ತಾ ಇದ್ದಾರೆ. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಟ್ವೀಟ್ ಮಾಡಿ ಈ ವಿಡಿಯೋಗಳು ಮಂಗಳೂರು ಗಲಭೆಯೋ ಅಥವಾ ಯಾವ ಗಲಭೆ ವಿಡಿಯೋನೋ ಗೊತ್ತಿಲ್ಲ ಎಂದು ಪ್ರಶ್ನೆಗಳ ಸುರಿಮಳೆಯನ್ನು ಸುರಿಸಿದ್ದಾರೆ.

Comments

Leave a Reply

Your email address will not be published. Required fields are marked *