ಡಿಜೆ ಹಾಕಿ ಹಿಂದೂ ವಿರೋಧಿ ಘೋಷಣೆ- ಮಚ್ಚು, ಲಾಂಗ್, ತಲ್ವಾರ್ ಬೀಸಿ ಪುಂಡಾಟ

ಬೆಂಗಳೂರು: ಶಾಂತಿ, ಸೌಹಾರ್ದತೆ, ಭಾವೈಕ್ಯತೆಗೆ ಹೆಸರಾಗಬೇಕಿದ್ದ ಹಬ್ಬ ಈದ್ ಮಿಲಾದ್ (Eid Milad). ಆದರೆ ಈ ಬಾರಿ ಲಾಂಗ್, ಮಚ್ಚು, ಡ್ರ್ಯಾಗರ್ ಗಳನ್ನು ಹಿಡಿದು ಪ್ರಚೋನಕಾರಿ ಡಾನ್ಸ್. ನೂರಾರು ಜನರ ಮಧ್ಯೆಯೇ ರಸ್ತೆಗೆ ಅಡ್ಡವಾಗಿ ನಿಂತು, ಹಿಂದೂ ವಿರೋಧಿ ಭಾಷಣಕ್ಕೆ ಡಿಜೆ ಸೌಂಡ್ ಮಿಕ್ಸ್ ಮಾಡಿ ಪುಂಡಾಟ ಮೆರೆಯಲಾಗಿದೆ.

ಬೆಂಗಳೂರಿನ ಸಿದ್ದಾಪುರ (Siddapura) ದ ಸೋಮೇಶ್ವರ ನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ, ಮುಸ್ಲಿಮರ ಹಬ್ಬ ಈದ್ ಮಿಲಾದ್ ಹಬ್ಬದ ದಿನ ನಡೆದ ಘಟನೆ. ಹಬ್ಬದ ಸಂಭ್ರಮದಲ್ಲಿ ನಗರದ ವಿವಿಧ ಭಾಗಗಳಲ್ಲಿ ಅಂದು ಸಾವಿರಾರು ಸಂಖ್ಯೆಯಲ್ಲಿ ಒಂದು ಕಡೆ ಸೇರಿ ಹಬ್ಬ ಆಚರಣೆ ಮಾಡುತ್ತಿದ್ದರು. ಆದರೆ ಸಿದ್ದಾಪುರದ ಸೋಮೇಶ್ವರ ನಗರದಲ್ಲಿ ಮಾತ್ರ, ಮುಸ್ಲಿಂ ಯುವಕರು, ಕೈಯಲ್ಲಿ ಲಾಂಗ್, ಮಚ್ಚು, ಡ್ರ್ಯಾಗರ್ ಸೇರಿದಂತೆ ವಿವಿಧ ಮಾರಕಾಸ್ತ್ರಗಳನ್ನು ಹಿಡಿದು ಡಾನ್ಸ್ ಮಾಡುತ್ತಿದ್ದರು. ಬರೇ ಇಷ್ಟೇ ಅಲ್ಲದೇ ಮುಸ್ಲಿಂ ನಾಯಕರು ಮಾಡಿರುವ ಹಿಂದೂ ವಿರೋಧಿ ಭಾಷಣಕ್ಕೆ ಜೋರು ಡಿಜೆ ಸೌಂಡ್ ಹಾಕಿ ಮಾರಕಾಸ್ತ್ರಗಳನ್ನು ಹಿಡಿದು ಪ್ರಚೋದಕಾರಿಯಾಗಿ ನಡುರಸ್ತೆಯಲ್ಲೇ ಡಾನ್ಸ್ ಮಾಡಿ ಪುಂಡಾಟ ಮೆರೆದಿದ್ರು.

ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋಗಳನ್ನು ನೋಡಿದ ಸಿದ್ದಾಪುರ ಪೊಲೀಸರು, ತಕ್ಷಣ ಅಲರ್ಟ್ ಆಗಿ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗೆ ಇಳಿದಿದ್ದರು. ವೀಡಿಯೋಗಳ ಅಧಾರದ ಮೇಲೆ 5 ಜನ ಯುವಕರು ಸೇರಿದಂತೆ 14 ಜನ ಅಪ್ರಾಪ್ತರನ್ನು ಬಂಧಿಸಿದ್ರು. ಈ ವಿಚಾರ ತಿಳಿದ ಆರೋಪಿಗಳ ಪೋಷಕರು, ಪೊಲೀಸ್ ಠಾಣೆ ಮುಂಭಾಗದಲ್ಲಿ ಜಮಾಯಿಸಿ, ನಮ್ಮ ಮಕ್ಕಳು, ಅಮಾಯಕರು, ಪೊಲೀಸರು ಅವರನ್ನು ಅಕ್ರಮವಾಗಿ ಬಂಧಿಸಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು. ಪ್ರಕರಣದಲ್ಲಿ ಮತ್ತಷ್ಟು ಜನರು ಭಾಗಿಯಾಗಿರುವ ಬಗ್ಗೆ ಮಾಹಿತಿ ಇದ್ದು, ಮತ್ತಷ್ಟು ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ. ಇದನ್ನೂ ಓದಿ: ಡಿಸಿ ಕಚೇರಿಗೆ ಬೀಗ ಹಾಕಿ ರೈತರಿಂದ ಪ್ರತಿಭಟನೆ

ಪೊಲೀಸ್ ಠಾಣೆ ಮುಂದೆ ಬಂದು ನಮ್ಮ ಮಕ್ಕಳು ಅಮಾಯಕರು, ಅಪ್ರಾಪ್ತರು ಅನ್ನೋ ಪೋಷಕರು, ಮಾರಕಾಸ್ತ್ರಗಳನ್ನು ಹಿಡಿದು ನಡುರಸ್ತೆಯಲ್ಲಿ ಡಾನ್ಸ್ ಮಾಡುವಾಗ ಏನ್ ಮಾಡ್ತಿದ್ರು ಅನ್ನೋದು ಪೋಲಿಸರ ಪ್ರಶ್ನೆ. ಮತ್ತೊಂದು ಕಡೆ ಬುದ್ಧಿ ಹೇಳಬೇಕಿದ್ದ ಸಮುದಾಯದ ಮುಖಂಡರು, ಪೋಷಕರೇ ಆ ಘಟನೆಗೆ ಸಾಕ್ಷಿಯಾಗಿದ್ದು ಮಾತ್ರ ದುರಂತ. ಇದನ್ನೂ ಓದಿ: ಪುಟಿನ್ ಕನಸಿನ ಸೇತುವೆ ಧ್ವಂಸಗೊಳಿಸಿದ್ದಕ್ಕೆ ಕೆರಳಿದ ರಷ್ಯಾ – ಉಕ್ರೇನ್ ಮೇಲೆ ಮತ್ತಷ್ಟು ತೀವ್ರ ದಾಳಿ

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *