ಪತ್ನಿಗೆ ಕೈಕೊಟ್ಟು ಮತ್ತೊಂದು ಮದ್ವೆ- ಆರತಕ್ಷತೆಗೆ ನಿಂತಿದ್ದ ವಧು-ವರನಿಗೆ ಬಿತ್ತು ಗೂಸಾ

– ಕಲ್ಯಾಣ ಮಂಟಪದಲ್ಲಿ ಡಿಶುಂ ಡಿಶುಂ

ಬೆಂಗಳೂರು: ಮೊದಲನೇ ಪತ್ನಿಗೆ ಕೈಕೊಟ್ಟು ಎರಡನೇ ಮದುವೆಯಾಗಿ ಆರತಕ್ಷತೆಗೆ ನಿಂತಿದ್ದ ಪತಿಗೆ ಧರ್ಮದೇಟು ಕೊಟ್ಟ ಘಟನೆ ನಗರದ ಪೀಣ್ಯಾ ದಾಸರಹಳ್ಳಿಯ ಸೌಂದರ್ಯ ಪಾರ್ಟಿ ಹಾಲ್‍ನಲ್ಲಿ ನಡೆದಿದೆ.

ಕೆಇಬಿಯಲ್ಲಿ ಬಿಲ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿರುವ ನಾಗರಾಜು ಧರ್ಮದೇಟು ತಿಂದ ಪತಿ. ಕಲ್ಯಾಣ ಮಂಟಪದಲ್ಲೇ ಮೊದಲನೇ ಪತ್ನಿ ಪಾರ್ವತಿ ಹಾಗೂ ಸಂಬಂಧಿಕರು ನಾಗರಾಜುನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲದೆ ವಧುವಿನ ಮೇಲೂ ಹಲ್ಲೆ ಮಾಡಿದ್ದಾರೆ.

ನಾಗರಾಜು ನಾಲ್ಕು ವರ್ಷಗಳ ಹಿಂದೆಯೇ ಪಾರ್ವತಿಯನ್ನು ಮದುವೆಯಾಗಿದ್ದ. ಆದರೆ ಆಕೆಗೆ ಗೊತ್ತಾಗದಂತೆ ಪರಿಚಯವಿದ್ದ ಯುವತಿಯ ಜೊತೆಗೆ ಭಾನುವಾರ ಮದುವೆಯಾಗಿ ಆರಕ್ಷತೆಗೆ ನಿಂತಿದ್ದ. ಈ ಸುದ್ದಿ ತಿಳಿಯುತ್ತಿದ್ದಂತೆ ಕಲ್ಯಾಣ ಮಂಟಪಕ್ಕೆ ಬಂದ ಪಾರ್ವತಿ ಹಾಗೂ ಸಂಬಂಧಿಕರು ನಾಗರಾಜುನನ್ನು ಥಳಿಸಿದ್ದಾರೆ. ಈ ವೇಳೆ ಎರಡೂ ಕುಟುಂಬಗಳು ಪರಸ್ಪರ ಹೊಡೆದಾಡಿದ್ದಾರೆ.

ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಪಾರ್ವತಿ, ಈಗ ಮದುವೆಯಾಗಿರುವ ಯುವತಿಯನ್ನು ಪತಿ ನಾಗರಾಜು ಆಗಾಗ ಮನೆಗೆ ಕರೆದುಕೊಂಡು ಬರುತ್ತಿದ್ದ. ಆಕೆಯ ಹುಟ್ಟು ಹಬ್ಬವನ್ನು ನಮ್ಮ ಮನೆಯಲ್ಲಿಯೇ ಆಚರಿಸಲಾಗಿತ್ತು. ಅಷ್ಟೇ ಅಲ್ಲದೆ ಕಳೆದ ಕೆಲವು ದಿನಗಳಿಂದ ವರದಕ್ಷಿಣೆ ತರುವಂತೆ ನನಗೆ ಒತ್ತಾಯಿಸುತ್ತಿದ್ದ ಎಂದು ದೂರಿದ್ದಾಳೆ.

ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಕಲ್ಯಾಣ ಮಂಟಪಕ್ಕೆ ಆಗಮಿಸಿದ ಪೀಣ್ಯ ಠಾಣೆಯ ಪೊಲೀಸರು ನಾಗರಾಜನನ್ನು ವಶಕ್ಕೆ ಪಡೆದಿದ್ದು, ವಿವಾರಣೆ ಆರಂಭಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *