ಗೆಳೆಯನ ನಂಬಿ ಕ್ಯಾಸಿನೋದಲ್ಲಿ 40 ಲಕ್ಷ ಬಂಡವಾಳ- ಸಂಜನಾಗೆ ಎದುರಾಗುತ್ತಾ ಸಂಕಷ್ಟ..?

ಬೆಂಗಳೂರು: ಗೆಳೆಯ ರಾಹುಲ್ ತೋನ್ಸೆಯನ್ನ ನಂಬಿ ನಟಿ ಸಂಜನಾ ಗಲ್ರಾನಿ ಕೈ ಸುಟ್ಟುಕೊಂಡಿದ್ದಾರೆ. ಆದರೆ ಸಂಜನಾಗೆ ದೋಖ ಆಗಿರೋದು ಒಂದಲ್ಲ, ಎರಡಲ್ಲ. ಬರೋಬ್ಬರಿ 40-45 ಲಕ್ಷ ಹಣ.

ಕ್ಯಾಸಿನೋದಲ್ಲಿ ಹಣ ಹೂಡಿದ್ರೆ ಹೆಚ್ಚು ಲಾಭ ಬರುತ್ತೆ ಅಂತ ನಂಬಿದ್ದ ನಟಿ ಸಂಜನಾ ತನ್ನ ಆತ್ಯಾಪ್ತ ಗೆಳೆಯ ರಾಹುಲ್ ತೋನ್ಸೆ ಕೈಯಲ್ಲಿ 40-45 ಲಕ್ಷ ಹಣ ನೀಡಿದ್ರಂತೆ. 2018ರಲ್ಲಿ ಶೇ.15 ಬಡ್ಡಿ ನೀಡುವುದಾಗಿ 40 ಲಕ್ಷ ಪಡೆದಿದ್ದ ರಾಹುಲ್, ಮೂರೇ ತಿಂಗಳಲ್ಲಿ 40 ಲಕ್ಷಕ್ಕೆ 70 ಲಕ್ಷ ಕೊಡ್ತೀನಿ ಅಂತ ಹೇಳಿದ್ನಂತೆ. ಆದರೆ ಇದೀಗ ಲಾಭ ಹೋಗ್ಲಿ ಅಸಲು ಹಣವನ್ನೂ ನೀಡದೆ ಉಂಡೇನಾಮ ಹಾಕಿದ್ದಾನೆ. ಇದೀಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಇದೇ ಕೇಸ್ ಸಂಜನಾಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಆಪ್ತ ಗೆಳೆಯನಿಂದ ವಂಚನೆ ಬಗ್ಗೆ ದೂರು ಕೊಟ್ಟಿದ್ದ ಸಂಜನಾಗೂ ಕಂಟಕ ಫಿಕ್ಸ್ ಆಂತ ಹೇಳಲಾಗ್ತಿದೆ. ಎಫ್‍ಐಆರ್ ಬೆನ್ನಲ್ಲೇ ಇಂದಿರಾನಗರ ಪೊಲೀಸರು 3 ದಿನಗಳಲ್ಲಿ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ರಾಹುಲ್‍ಗೆ ಸಮನ್ಸ್ ಜಾರಿ ಮಾಡಿದ್ದಾರೆ. ಈ ಬೆನ್ನಲ್ಲೇ ನಟಿ ಸಂಜನಾ ಗಲ್ರಾನಿ ವಿಚಾರಣೆ ನಡೆಸಲಿರುವ ಪೊಲೀಸರು, ಕ್ಯಾಸಿನೋಗೆ ಹಣ ಹೂಡಿಕೆ ಮಾಡಿದ್ದರ ಮೂಲ ಕೆದಕಿದ್ದಾರೆ. ಈ ಸಂಬಂಧ ಐಟಿ ಇಲಾಖೆಗೂ ಪೊಲೀಸರು ಪತ್ರ ಬರೆಯುವ ಸಾಧ್ಯತೆ ಇದೆ. ಇದನ್ನೂ ಓದಿ: ನಟಿ ಸಂಜನಾ ಗಲ್ರಾನಿಗೆ ಕ್ಯಾಸಿನೋ ದೋಖಾ – ಸ್ನೇಹಿತನಿಂದಲೇ ಹಣ ದುಪ್ಪಟ್ಟು ಆಮಿಷ

ಒಟ್ಟಿನಲ್ಲಿ ಸಂಜನಾಗೆ ತಾನೇ ನೀಡಿದ ದೂರು ಕಂಟಕವಾಗಿ ಕಾಡುವ ಸಾಧ್ಯತೆ ಇದೆ. ಒಮದು ವೇಳೆ 40 ಲಕ್ಷ ಹಣದ ಮೂಲ ಸರಿಯಾಗಿ ನೀಡಿದ್ದೇ ಆದಲ್ಲಿ ಮಾತ್ರ ಸಂಜನಾ ಪಾರಾಗಲಿದ್ದಾರೆ.

Comments

Leave a Reply

Your email address will not be published. Required fields are marked *