ಬೆಂಗಳೂರು: ತವರು ಮನೆಗೆ ಹಣ ಕಳಿಸಿದ್ದಕ್ಕೆ ಸ್ಯಾಂಡಲ್‍ವುಡ್ ನಟ ಬಾಲು ನಾಗೇಂದ್ರ ತಮ್ಮ ಧರ್ಮಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ.
ಹುಲಿರಾಯ, ಕಪಟನಾಟಕ ಪಾತ್ರಧಾರಿ, ಕಡ್ಡಿಪುಡಿ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಬಾಲು ನಾಗೇಂದ್ರ, ಪತ್ನಿ ತವರು ಮನೆಗೆ ಹಣ ಕಳಿಸುತ್ತಿರುವುದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಅವರ ಪತ್ನಿ ದೂರು ನೀಡಿದ್ದಾರೆ.

ದೂರಿನಲ್ಲೇನಿದೆ?:
ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದ ನಾಗೇಂದ್ರ ಅವರ ಪತ್ನಿ, ಪ್ರತೀ ತಿಂಗಳು 8000 ಹಣವನ್ನು ತವರು ಮನೆಗೆ ಕಳುಹಿಸುತ್ತಿದ್ದರು. ಇದರಿಂದ ಕೋಪಗೊಂಡ ನಟ, ನನಗೆ ದಿನ ಹೊಡೆಯುತ್ತಿದ್ದರು. ಅಲ್ಲದೆ ಪ್ರತೀ ದಿನ ಕೆಲಸಕ್ಕೆ ಬಿಡುವಾಗ ರಸ್ತೆಯುದ್ದಕ್ಕೂ ಥಳಿಸುತ್ತಿದ್ದರು ಎಂದು ಬಾಲು ಪತ್ನಿ ಆರೋಪ ಮಾಡಿದ್ದಾರೆ.

ನಟ ನಾಗೇಂದ್ರ ಹೆಂಡತಿ ಮಗುವನ್ನು ಹೊಡೆದು ತವರು ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಕೆಲಸಕ್ಕೆ ಹೋಗಲ್ಲ ಓದ್ಕೋಬೇಕು ಎಂದು ಪತ್ನಿ ಹೇಳಿದ್ದಕ್ಕೆ ಕೋಪಗೊಂಡ ನಾಗೇಂದ್ರ ಕೆಲಸಕ್ಕೆ ಹೋಗುವಂತೆ ದಿನ ಹಿಂಸೆ ನೀಡುತ್ತಿದ್ದರು. ನನ್ನ ಬಳಿಯಿಂದ ಪಡೆದ 1.5 ಲಕ್ಷ ಹಣವನ್ನು ವಾಪಸ್ ಮಾಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇವೆಲ್ಲಾ ವಿಚಾರಗಳಿಂದ ಬೇಸತ್ತು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಟನ ವಿರುದ್ಧ ಐಪಿಸಿ ಸೆಕ್ಷನ್ 498ಎ (ಪತ್ನಿಗೆ ಹಿಂಸೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply