ರುಂಡ ಒಂದ್ಕಡೆ, ಮುಂಡ ಒಂದ್ಕಡೆ- ರೌಡಿಶೀಟರ್ ಅಯೂಬ್ ಖಾನ್ ಭೀಕರ ಕೊಲೆ!

ಬೆಂಗಳೂರು: ಹಫ್ತಾ ವಸೂಲಿ ಮಾಡೋದು, ಅಲ್ಲದೇ ಸಿಕ್ಕವರನ್ನು ಹೊಡೆದು ಹಲ್ಲೆ ಮಾಡ್ತಿದ್ದ ರೌಡಿಶೀಟರೊಬ್ಬ ಭೀಕರವಾಗಿ ಕೊಲೆಯಾದ ಘಟನೆ ನಗರದಲ್ಲಿ ನಡೆದಿದೆ.

ಮೃತ ರೌಡಿಶೀಟರನ್ನು ಅಯೂಬ್ ಖಾನ್ ಎಂದು ಗುರುತಿಸಲಾಗಿದೆ. ಕೆಜಿ ಹಳ್ಳಿಯ ಗೋವಿಂದಪುರದಲ್ಲಿ ವಾಸವಾಗಿದ್ದ ಅಯೂಬ್ ಕಂಡಕಂಡೋರಿಗೆಲ್ಲಾ ಬೆದರಿಸಿ ಹಣ ದೋಚುತ್ತಿದ್ದ. ಅಲ್ಲದೇ ಸಿಕ್ಕವರನ್ನು ಹೊಡೆದು ಹಲ್ಲೆ ಮಾಡ್ತಿದ್ದ. ಆದ್ರೆ ಶನಿವಾರ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದವನು ಇಂದು ಬೆಳಗ್ಗೆ ಹೆಣವಾಗಿ ಸಿಕ್ಕಿದ್ದಾನೆ. ಬಾಗಲೂರಿನ ನೀಲಗಿರಿಯ ತೋಪಿನಲ್ಲಿ ಆಯೂಬ್ ರುಂಡ ಮುಂಡ ಬೇರೆ ಬೇರೆಯಾಗಿ ಬಿದ್ದಿತ್ತು.

ಬಾಗಲೂರು ಬಳಿ ಎರಡು ಎಕರೆ ಜಮೀನಿಗೆ ಹೊಡೆದಾಟ ನಡೆದಿದ್ದು, ಅದಕ್ಕಾಗಿಯೇ ಕೊಲೆ ಮಾಡಿ ಅವನ ಜಮೀನನ ಪಕ್ಕದಲ್ಲೇ ಹಾಕಿದ್ದಾರೆ ಅಂತಾ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಬಾಗಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *