ರಜನಿಕಾಂತ್ ಅಭಿಮಾನಿಗಳಿಂದ ಸಿನಿಮಾ ಮಂದಿರದಲ್ಲಿ ಗಲಾಟೆ

ಬೆಂಗಳೂರು: ಇಂದು ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಸಂಕ್ರಾಂತಿ ಹಬ್ಬ. ಹೌದು ಇಂದು ವಿಶ್ವಾದ್ಯಂತ ರಜನಿಕಾಂತ್ ಅಭಿನಯದ ದರ್ಬಾರ್ ಸಿನಿಮಾ ಬೆಳ್ಳಿತೆರೆಗೆ ಬಂದಿದೆ. ಎಷ್ಟೋ ಚಿತ್ರಮಂದಿರಗಳಲ್ಲಿ ಬೆಳಗ್ಗೆ 7:30 ಕ್ಕೆ ಫಸ್ಟ್ ಶೋ ಶುರುವಾಗಿದೆ. ಮಾಸ್ ಲುಕ್‍ನಲ್ಲಿ ರಜನಿಕಾಂತ್ ಅಭಿಮಾನಿಗಳನ್ನು ಮನಸೂರೆಗೊಳಿಸಿದ್ದಾರೆ.

ಎ.ಆರ್ ಮುರುಗನ್ ನಿರ್ದೇಶನದ ಪಕ್ಕ ಕಮರ್ಷಿಯಲ್ ಸಿನಿಮಾದಲ್ಲಿ ಸ್ಟೈಲ್ ಕಿಂಗ್ ರಜನಿಕಾಂತ್‍ಗೆ ಜೋಡಿಯಾಗಿ ನಯನತಾರಾ ಸಾಥ್ ನೀಡಿರೋ ಸಿನಿಮಾ ನೋಡಲು ಬಂದ ಅಭಿಮಾನಿಗಳು ಗಲಾಟೆ ಮಾಡಿಕೊಂಡಿದ್ದಾರೆ. ಬೆಂಗಳೂರು ವಿದ್ಯಾರಣ್ಯಪುರದ ಬಳಿ ಇರೋ ಸಿಂಗಾಪುರದ ವೈನಿಧಿ ಚಿತ್ರಮಂದಿರದಲ್ಲಿ ಅಭಿಮಾನಿಗಳು ಥೀಯೇಟರ್ ಸಿಬ್ಬಂದಿ ವಿರುದ್ಧ ಗಲಾಟೆ ಮಾಡಿದ್ದಾರೆ.

ಬೆಳಗ್ಗೆ 7:30ಕ್ಕೆ ಆರಂಭವಾಗಬೇಕಾಗಿದ್ದ ಮೊದಲ ಶೋ 9:30 ಅದ್ರೂ ಪ್ರಾರಂಭ ಮಾಡಿಲ್ಲ. ತಾಂತ್ರಿಕ ಕಾರಣಗಳನ್ನು ಹೇಳಿ ಸಿನಿಮಾದ ಮೊದಲ ಶೋ ಇನ್ನೂ ಪ್ರಾರಂಭವಾಗದ ಹಿನ್ನೆಲೆಯಲ್ಲಿ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಟಾಕೀಸ್‍ನ ಸಿಬ್ಬಂದಿ ಪ್ರೇಕ್ಷಕರ ಮೇಲೆ ದರ್ಪ ತೋರುತ್ತಾ ಏನೂ ಮಾಡೋದಕ್ಕೆ ಆಗಲ್ಲ ಸಿನಿಮಾ 11 ಗಂಟೆಗೆ ಶುರು ಮಾಡುತ್ತೇವೆ. ಇಷ್ಟ ಇದ್ದರೆ ನೋಡಿ ಇಲ್ವಾ ಹೋಗಿ ಎಂದಿದ್ದಾರೆ.

ಈ ಕಾರಣಕ್ಕೆ ಅಭಿಮಾನಿಗಳು ಆಕ್ರೋಶಗೊಂಡಿದ್ದು, ಸ್ಥಳಕ್ಕೆ ಸ್ಥಳೀಯ ಪೊಲೀಸರು ಆಗಮಿಸಿ ಪ್ರೇಕ್ಷಕರನ್ನು ಸಮಾಧಾನ ಮಾಡೋ ಕೆಲಸ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *