ಸ್ವಂತ ಖರ್ಚಿನಲ್ಲಿ ಸಾರ್ವಜನಿಕರಿಗಾಗಿ ಮೊಬೈಲ್ ಟಾಯ್ಲೆಟ್ ಸ್ಥಾಪಿಸಿದ ಪಿಎಸ್‍ಐ

bangaluru

ಬೆಂಗಳೂರು: ತನ್ನ ತಾಯಿಯ ಶೌಚಕ್ಕೆ ಜಾಗ ಸಿಗದ ಕಾರಣ ಮನನೊಂದಿದ್ದ ಪಿಎಸ್‍ಐ ಒಬ್ಬರು ಇಡೀ ಸಮಾಜವೇ ಮೆಚ್ಚುವಂತ ಸಮಾಜಮುಖಿ ಕಾರ್ಯ ಮಾಡಿದ್ದಾರೆ. ತನ್ನ ತಾಯಿಗಾದ ತೊಂದರೆ ಮತ್ತೊಬ್ಬರಿಗಾಗದಂತೆ ತಪ್ಪಿಸಲು ಸ್ವಂತ ಖರ್ಚಿನಲ್ಲಿ ಮೊಬೈಲ್ ಶೌಚಾಲಯ ನಿರ್ಮಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ವಿಧಾನಸೌಧ ಭದ್ರತಾ ವಿಭಾಗದಲ್ಲಿ ಪಿಎಸ್‍ಐ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಾಂತಪ್ಪ ಜಡೆಮ್ಮನವರ್ ಅವರು, ತಮ್ಮ ಸ್ವಂತ ದುಡ್ಡಿನಿಂದ ಬೆಂಗಳೂರಿನ ಗೊರಗುಂಟೆಪಾಳ್ಯ ಬಸ್ ನಿಲ್ದಾಣ ಬಳಿ ಸಾರ್ವಜನಿಕರಿಗಾಗಿ ಮೊಬೈಲ್ ಟಾಯ್ಲೆಟ್ ನಿರ್ಮಿಸಿದ್ದಾರೆ. ಇದನ್ನೂ ಓದಿ: ಮದುವೆಗೆ ಅಡ್ಡಿಯಾಯ್ತು ಕುಜ ದೋಷ – ಮಹಿಳಾ ಪೊಲೀಸ್ ಬಲಿ

bangaluru

ಉತ್ತರ ಕರ್ನಾಟಕ ಮೂಲದವರಾದ ಶಾಂತಪ್ಪ, ನಾಲ್ಕು ತಿಂಗಳ ಹಿಂದೆ ತನ್ನ ತಾಯಿ ಜೊತೆ ಊರಿಗೆ ಹೋಗುವುದಕ್ಕೆಂದು ಗೊರಗುಂಟೆಪಾಳ್ಯ ಬಸ್ ನಿಲ್ದಾಣಕ್ಕೆ ಬಂದಿದ್ದರು ಈ ವೇಳೆ ತನ್ನ ತಾಯಿ ಶೌಚಕ್ಕೆ ಹೋಗಬೇಕಾದ ಸಂದರ್ಭದಲ್ಲಿ ವ್ಯವಸ್ಥೆ ಇಲ್ಲದಿರುವುದನ್ನು ಕಂಡು ಈ ಬದಲಾವಣೆ ತರುವುದಕ್ಕೆ ಮುಂದಾಗುತ್ತಾರೆ. ಪ್ರಾರಂಭದಲ್ಲಿ ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ಆದರೆ ಈ ಬಗ್ಗೆ ಅಧಿಕಾರಿಗಳು ಗಮನ ನೀಡಿ ಸಮಸ್ಯೆ ಬಗೆಹರಿಸದ ಕಾರಣ, ಖುದ್ದು ಮೊಬೈಲ್ ಟಾಯ್ಲೆಟ್ ಸ್ಥಾಪನೆ ಮಾಡಿದ್ದಾರೆ. ಇನ್ನೂ ಈ ಕಾರ್ಯಕ್ಕೆ ಕೆಲ ಸಮಾನ ಮನಸ್ಕ ಸ್ನೇಹಿತರು ಸಹ ಕೈ ಜೋಡಿಸಿದ್ದು, ಪಿಎಸ್‍ಐ ಶಾಂತಪ್ಪಗೆ ನೆರವಾಗುತ್ತಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸದಿದ್ದರೆ ಮಹಿಳೆಯರು ಪ್ರಾಣಿಗಳಂತೆ ಕಾಣ್ತಾರೆ: ತಾಲಿಬಾನ್

ಎರಡು ದಿನದ ಹಿಂದೆ ಓಪನ್ ಆಗಿರುವ ಮೊಬೈಲ್ ಟಾಯ್ಲೆಟ್‍ನನ್ನು ತೃತೀಯ ಲಿಂಗಿ ಒಬ್ಬರು ಉದ್ಘಾಟಿಸಿರುವುದು ವಿಶೇಷ. ಒಟ್ಟು 10 ಶೌಚಾಲಯಗಳಿದ್ದು ಗಂಡಸರು, ಹೆಂಗಸರು ಮತ್ತು ತೃತೀಯ ಲಿಂಗಗಳಿಗೆ ಪ್ರತೇಕ ವರ್ಗಾವಣೆ ಮಾಡಲಾಗಿದೆ. ಶೌಚಾಲಯ ತುಂಬಿದ ನಂತರ, ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಸಹ ಇದ್ದು, ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಒಟ್ಟಾರೆ ಪಿಎಸ್‍ಐ ಶಾಂತಪ್ಪ ಜಡೆಮ್ಮನವರ್ ಕಾರ್ಯಕ್ಕೆ ಅನೇಕ ಸಾರ್ವಜನಿಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಮಸ್ಯೆ ಗೊತ್ತಿದ್ದು ಬಗೆಹರಿಸದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Live Tv

Comments

Leave a Reply

Your email address will not be published. Required fields are marked *