ಮದರಸಗಳಿಗೆ ತೆರಳಿ ಸಿಎಎ ಬಗ್ಗೆ ಮನವರಿಕೆ ಮಾಡಿಕೊಟ್ಟ ಸಿಲಿಕಾನ್ ಸಿಟಿ ಪೊಲೀಸ್ರು

ಬೆಂಗಳೂರು: ಬೆಂಗಳೂರು ಪೊಲೀಸರು ಮದರಸಗಳಿಗೆ ಹೋಗಿ ಪೌರತ್ವ ವಿಧೇಯಕ ಕಾಯ್ದೆಯ ಬಗ್ಗೆ ಮುಸ್ಲಿಂರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಸಿಎಎ ಕಾಯ್ದೆ ವಿರೋಧಿಸಿ ಗುರುವಾರ ಸಾಕಷ್ಟು ಜನ, ನಿಷೇಧಾಜ್ಞೆ ನಡುವೆಯೂ ಪ್ರತಿಭಟನೆ ನಡೆಸಿದ್ರು. ಇವತ್ತು ಈ ಪ್ರತಿಭಟನೆಯ ಕಾವು ಮತ್ತಷ್ಟು ಹೆಚ್ಚಾಗಬಹುದು ಅನ್ನೊ ನಿರೀಕ್ಷೆಗಳು ಸುಳ್ಳಾಗಿವೆ. ಯಾಕಂದ್ರೆ ಶುಭ ಶುಕ್ರವಾರದ ದಿನ ಪೊಲೀಸ್ರು ಚಾಣಾಕ್ಷ ಕೆಲಸ ಮಾಡಿದ್ದಾರೆ. ಇವತ್ತು ಶುಕ್ರವಾರವಾಗಿದ್ದರಿಂದ ಮದರಸಾಗಳಿಗೆ ಮುಸ್ಲಿಂ ಬಾಂಧವರು ಪ್ರಾರ್ಥನೆಗೆ ಬಂದಿದ್ದರು.

ಇದನ್ನೇ ಪಾಸಿಟಿವ್ ಆಗಿ ತೆಗೆದುಕೊಂಡ ಸಿಲಿಕಾನ್ ಸಿಟಿಯ ಪೊಲೀಸರು ಬಹುತೇಕ ಕಡೆ ಮದರಸಗಳಿಗೆ ಹೋಗಿ, ಮುಸ್ಲಿಂ ಬಾಂಧವರ ಜೊತೆ ಮಾತುಕತೆ ನಡೆಸಿದ್ದಾರೆ. ಎಚ್ ಎಸ್ ಆರ್ ಲೇಔಟ್ ಇನ್ಸ್ ಪೆಕ್ಟರ್ ರಾಘವೇಂದ್ರ ನಾವೆಲ್ಲಾ ಹಿಂದೂ ಮುಸ್ಲಿಂ ಕ್ರೈಸ್ತ ಅನ್ನೊದಕ್ಕಿಂತ ಮಿಗಿಲಾಗಿ ಭಾರತೀಯರು. ವದಂತಿಗಳಿಗೆ ಕಿವಿಗೊಡಬೇಡಿ. ಸುಭದ್ರ ಭಾರತಕ್ಕಾಗಿ ಸಿಎಎ ಜಾರಿಗೆ ತರಲಾಗಿದೆ. ಇದ್ರಿಂದ ಮುಸ್ಲಿಂರಿಗೆ ಭಯವಿಲ್ಲ. ನಿಮಗೇನಾದ್ರು ಡೌಟ್ ಇದ್ದಾರೆ ನಮ್ಮ ಬಳಿ ಕೇಳಿ ಎಂದು ಮನವೊಲಿಸುವ ವಿಡಿಯೋ ವೈರಲ್ ಆಗಿದೆ.

Comments

Leave a Reply

Your email address will not be published. Required fields are marked *