ಐತಿಹಾಸಿಕ ಬೆಂಗ್ಳೂರು ಕರಗ ಉತ್ಸವ – ನಗರದ ವಿವಿಧ ಬೀದಿಗಳಲ್ಲಿ ಮೆರವಣಿಗೆ

ಬೆಂಗಳೂರು: ಆದಿಶಕ್ತಿ ಸ್ವರೂಪಿಣಿ ದ್ರೌಪದಿಯ ಆರಾಧನೆಯ ಪ್ರತೀಕವಾಗಿರೋ ಕರಗ ಮಹೋತ್ಸವ ನಡೀತಿದೆ. ತಿಗಳರಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಾಲಯದಿಂದ ಹೊರಟ ಹೂವುಗಳಿಂದ ಅಲಂಕೃತವಾದ ಕರಗ ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿತು.

ಬೆಂಗಳೂರು ಸಿಟಿಯ ತಿಗಳರ ಪೇಟೆ ಶ್ರೀ ಧರ್ಮರಾಯಸ್ವಾಮಿ ದೇವಾಲಯದಿಂದ ಹೊರಟು ನಗರ್ತಪೇಟೆ ವೇಣುಗೋಪಾಲ ಸ್ವಾಮಿ ದೇವಾಲಯದಿಂದ ಸಿದ್ದಣ್ಣಗಲ್ಲಿ, ಕಬ್ಬನ್ ಪೇಟೆ, ಗಾಣಿಗರ ಪೇಟೆ, ದೊಡ್ಡಪೇಟೆ, ಕೆ.ಆರ್ ಮಾರುಕಟ್ಟೆ, ಅರಳೇಪೇಟೆ, ಮಸ್ತಾನ್ ಸಾಹೇಬ್ರ ದರ್ಗಾದಿಂದ ಬಳೇಪೇಟೆ ನಂತರ ಅಣ್ಣಮ್ಮ ದೇವಾಲಯ, ಅವೆನ್ಯೂ ರೋಡ್ ನಂತರ ಕುಂಬಾರ ಪೇಟೆ, ಗೊಲ್ಲರ ಪೇಟೆ, ತಿಗಳರ ಪೇಟೆ, ಕಬ್ಬನ್ ಪೇಟೆ ಮೂಲಕ ಸಾಗುತ್ತಿದ್ದು ಧರ್ಮರಾಯ ಸ್ವಾಮಿ ದೇವಸ್ಥಾನ ತಲುಪುತ್ತದೆ.

ಇದೇ ಮೊದಲ ಬಾರಿಗೆ ಅರ್ಚಕ ಮನು ಕರಗ ಹೋರುತ್ತಾರೆ ಎನ್ನಲಾಗಿತ್ತು. ಆದ್ರೆ ಕೊನೆಯ ಕ್ಷಣದಲ್ಲಿ ಮನು ಬದಲಾಗಿ ಪ್ರತಿ ಬಾರಿ ಕರಗ ಹೊರುತ್ತಿದ್ದ ಜ್ಞಾನೇಂದ್ರ ಎಂಬವರೇ ಕರಗ ಹೊತ್ತಿದ್ದಾರೆ.


ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲೂ ವಿಜೃಂಭಣೆಯಿಂದ ಕರಗ ಆಚರಿಸಲಾಯ್ತು. ಈ ಬಾರಿ ಅರ್ಜುನಪ್ಪನನವರ ಪುತ್ರ ಎ. ರಮೇಶ್ ಕರಗ ಹೊತ್ತರು. ದ್ರೌಪದಮ್ಮನ ದೇವಾಲಯದಿಂದ 2.45ಕ್ಕೆ ಹೊರ ಬರುತ್ತಿದ್ದಂತೆ ಭಕ್ತರ ಕರತಾಲ ಮುಗಿಲು ಮುಟ್ಟಿತ್ತು. ದ್ರೌಪದಿ ದೇವಿಯ ರಕ್ಷಕರಾದ ವೀರಕುಮಾರರು ದೀಕ್ ದೀಲ್ ಎಂದು ಘೋಷಣೆ ಕೂಗುತ್ತಾ, ಎದೆ ಬಡಿದುಕೊಂಡು ದೇಹ ದಂಡಿಸಿದ್ರು.

Comments

Leave a Reply

Your email address will not be published. Required fields are marked *