ಮೋದಿ ಮಸೀದಿಯಲ್ಲಿ ಮುಸ್ಲಿಮೇತರರಿಗೂ ಪ್ರವೇಶ!

ಬೆಂಗಳೂರು: 170 ವರ್ಷಗಳ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಮಸೀದಿಯಲ್ಲಿ ಮುಸ್ಲಿಂಯೇತರರಿಗೂ ಪ್ರವೇಶ ಕಲ್ಪಿಸಿರುವ ಅಪರೂಪದ ಘಟನೆ ನಗರದಲ್ಲಿ ನಡೆದಿದೆ. ಜಾತಿ, ಧರ್ಮಗಳು ಬೇರೆಯಾದರೂ ನಾವೇಲ್ಲಾ ಒಂದೇ ಎಂಬ ಭಾವನೆಗೆ ಐತಿಹಾಸಿಕ ಘಟನೆ ಸಾಕ್ಷಿಯಾಗಿದೆ.

ಬೆಂಗಳೂರಿನ ಶಿವಾಜಿನಗರದ ಟಾಸ್ಕರ್ ಟೌನ್‍ನಲ್ಲಿರೋ ಮೋದಿ ಮಸೀದಿಯಲ್ಲಿ ಮುಸ್ಲಿಮೇತರರಿಗೂ ಪ್ರವೇಶ ಕಲ್ಪಿಸಿದ್ದು, ಇತಿಹಾಸ ಸೃಷ್ಟಿಸಿದೆ. ನಿನ್ನೆ “Visit My Mosque Day” ಎಂಬ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇಲ್ಲಿ ವಿವಿಧ ಧರ್ಮಗಳ 400 ಜನ ಮುಸ್ಲಿಂಮೇತರಿಗೆ ಪ್ರವೇಶ ಕಲ್ಪಿಸಲಾಗಿತ್ತು. ಇದು ಸರ್ವ ಧರ್ಮಿಯರ ಸಮಾವೇಶಕ್ಕೆ ಸಾಕ್ಷಿಯಾದ್ದಂತಿತ್ತು. ಈ ವೇಳೆ ಯಾವುದೇ ರಾಜಕೀಯ ವಿಚಾರವನ್ನು ಮಾತನಾಡದಿರುವುದು ವಿಶೇಷವಾಗಿದೆ. ಈ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಮೋದಿ ಮಸೀದಿ ಹೆಸರು ಬರಲು ಕಾರಣವೇನು?
18ನೇ ದಶಕದಲ್ಲಿ ಮೋದಿ ಮಸೀದಿಯನ್ನು ನಿರ್ಮಾಣ ಮಾಡಲಾಗಿತ್ತು. 2015ರಲ್ಲಿ ಈ ಮಸೀದಿಯನ್ನು ಕೆಡವಲಾಗಿತ್ತು. ಸುಮಾರು 170 ವರ್ಷಗಳ ನಂತರ ಹೊಸದಾಗಿ ನವೀಕರಣ ಮಾಡಲಾಗಿದೆ. ಮಸೀದಿಗೆ ಮೋದಿ ಹೆಸರು ಬರಲು ಕಾರಣ, ಮೋದಿ ಅಬ್ದುಲ್ ಗಾಪೂರ್ ಎಂಬವರು ಮಸೀದಿ ನಿರ್ಮಿಸಲು ಸಹಾಯ ಮಾಡಿದ್ದಕ್ಕೆ ಈ ಹೆಸರು ಬಂದಿದೆ. ಮಸೀದಿಯನ್ನು ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿ ಕಟ್ಟಲಾಗಿದೆ.

Comments

Leave a Reply

Your email address will not be published. Required fields are marked *