ಮಲ್ಲೇಶ್ವರದ ಬಿಜೆಪಿ ಮಂಡಲ ಕಾರ್ಯದರ್ಶಿ ಆತ್ಮಹತ್ಯೆ

ಬೆಂಗಳೂರು: ಮಲ್ಲೇಶ್ವರದ ಬಿಜೆಪಿ (BJP) ಮಂಡಲ ಕಾರ್ಯದರ್ಶಿ ಮಂಜುಳಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮತ್ತಿಕೆರೆಯಲ್ಲಿ ನಡೆದಿದೆ.

ಸದ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಯಶವಂತಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಲ್ಲೇಶ್ವರದ ಬಿಜೆಪಿ ಮಂಡಲಕ್ಕೆ ಒಂದು ದಿನದ ಹಿಂದೆಯಷ್ಟೇ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಯಗಳ ನೇಮಕವಾಗಿತ್ತು ಎಂದು ತಿಳಿದುಬಂದಿದೆ. ಇದನ್ನೂ ಓದಿ: `ದೃಶ್ಯಂ’ ಸಿನಿಮಾ ಶೈಲಿಯಲ್ಲಿ ಮಹಿಳೆ ಕೊಲೆ ಮಾಡಿ ಸಾಕ್ಷ್ಯ ನಾಶ – 4 ತಿಂಗಳ ಬಳಿಕ ಆರೋಪಿ ಅರೆಸ್ಟ್

ಕೆಲ ದಿನಗಳ ಹಿಂದೆಯಷ್ಟೇ ಪತಿಯನ್ನು ಕಳೆದುಕೊಂಡಿದ್ದ ಮಂಜುಳಾ, ಮಾನಸಿಕವಾಗಿ ನೊಂದಿದ್ದರಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿತ್ತು. ಸದ್ಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿರೋಧಿಸಿ ರೈತರ ಸಭೆ – ಬೃಹತ್ ಪಾದಯಾತ್ರೆಗೆ ನಿರ್ಧಾರ

ಇಂದು ಮಧ್ಯಾಹ್ನ 2:30ರ ಸುಮಾರಿಗೆ ಮತ್ತಿಕೆರೆಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಅಂತಿಮ ದರ್ಶನಕ್ಕೆ ಮಾಜಿ ಡಿಎಸಿಂ ಡಾ.ಸಿ.ಎನ್.ಅಶ್ವಥ್‌ ನಾರಾಯಣ್‌ ತೆರಳಿದ್ದಾರೆ. ಇದನ್ನೂ ಓದಿ: ಗ್ಯಾರಂಟಿಗೆ ಮುಕ್ಕಾಲು ಭಾಗ ಹಣ ಖರ್ಚು ಮಾಡಿದ್ರೆ ಆಡಳಿತ ಕಷ್ಟ: ರಂಭಾಪುರಿ ಶ್ರೀ ಅಸಮಾಧಾನ