ಪೊಲೀಸ್ ಡ್ರೆಸ್ ಹಾಕಿದ್ರೂ ಒದೆ ತಿಂದ ಕುರಿ ಪ್ರತಾಪ್ – ಮನೆಮಂದಿ ಗುಟ್ಟನ್ನು ಬಯಲು ಮಾಡಿದ ಕಿಚ್ಚ

ಬೆಂಗಳೂರು: ರಿಯಾಲಿಟಿ ಶೋ ಬಿಗ್‍ಬಾಸ್ ಶುರುವಾಗಿ ಒಂದು ವಾರ ಕಳೆದಿದೆ. ಹೀಗಾಗಿ ಕಿಚ್ಚ ಸುದೀಪ್ ಮೊದಲ ಬಿಗ್‍ಬಾಸ್ ಪಂಚಾಯ್ತಿ ಕಟ್ಟೆ ನಡೆಸಿದ್ದಾರೆ. ಇಲ್ಲಿ 18 ಸ್ಪರ್ಧಿಗಳು ಒಬ್ಬರ ಬಗ್ಗೆ ಮತ್ತೊಬ್ಬರು ತಿಳಿದುಕೊಳ್ಳುವುದು ತುಂಬಾ ಇದೆ ಅನ್ನೋದನ್ನ ಕಿಚ್ಚ ಸುದೀಪ್ ತಿಳಿಸಿದ್ದಾರೆ.

18 ಸ್ಪರ್ಧಿಗಳು ಬಿಗ್ ಮನೆಗೆ ಎಂಟ್ರಿ ಕೊಡುವಾಗ ಪ್ರತಿಯೊಬ್ಬರಿಗೂ ಒಂದೊಂದು ಲಕೋಟೆಯನ್ನು ಕೊಟ್ಟು ಕಳುಹಿಸಲಾಗಿತ್ತು. ಅದರಲ್ಲಿ ಸ್ಪರ್ಧಿಗಳ ಗುಟ್ಟನ್ನು ಬರೆಯಲಾಗಿತ್ತು. ಆ ಗುಟ್ಟು ಯಾರದ್ದೆಂದು ಲಕೋಟೆ ಬಂದಿದ್ದ ಸ್ಪರ್ಧಿ ಕಂಡು ಹಿಡಿಯಬೇಕಿತ್ತು. ಈಗ ಈ ಗುಟ್ಟುಗಳನ್ನು ಮೊದಲ ಬಿಗ್‍ಬಾಸ್ ಪಂಚಾಯ್ತಿ ಕಟ್ಟೇಲಿ ಸ್ಪರ್ಧಿಗಳ ಗುಟ್ಟನ್ನು ಕಿಚ್ಚ ಸುದೀಪ್ ರಿವೀಲ್ ಮಾಡಿದ್ದಾರೆ.

ಬಿಗ್‍ಬಾಸ್ ಸ್ಟರ್ಧಿ ಸುಜಾತ ಅವರಿಗೆ ‘ಪೊಲೀಸ್ ಡ್ರೆಸ್ ಹಾಕಿದ್ರೂ ಒದೆ ತಿಂದವರು’ ಎಂಬ ಗುಟ್ಟು ಬಂದಿತ್ತು. ಈ ಗುಟ್ಟು ಹರೀಶ್ ರಾಜ್ ಅವರದ್ದು ಎಂದು ಬರೆದಿದ್ದರು. ಆದರೆ ಆ ಗುಟ್ಟು ಕುರಿ ಪ್ರತಾಪ್ ಅವರದ್ದಾಗಿತ್ತು. ಹೌದು ಒಂದು ದಿನ ಕುರಿಗಳು ಸಾರ್ ಕುರಿಗಳು ಕಾಮಿಡಿ ಮಾಡುವಾಗ ಪ್ರತಾಪ್ ಪೊಲೀಸ್ ಡ್ರೆಸ್ ಹಾಕಿ ಒಬ್ಬರನ್ನು ಬಕ್ರಾ ಮಾಡಲು ಮುಂದಾಗಿದ್ದರು. ಕಾರ್ಯಕ್ರಮ ಮುಗಿದ ಮೇಲೆ ಸುಮ್ಮನೆ ತಮಾಷೆಗೆ ಮಾಡಿದ್ವಿ ಎಂದು ಹೇಳಿದ್ದಾರೆ. ತಕ್ಷಣ ಅಲ್ಲಿದ್ದ ಜನರು ಕುರಿ ಪ್ರತಾಪ್ ಅವರನ್ನ ಹಿಗ್ಗಾಮುಗ್ಗ ಥಳಿಸಿದ್ದಾರೆ.

ವಾಸುಕಿ ಅವರಿಗೆ ‘ಇನ್ನೂ ಸ್ವಲ್ಪ ದಿನ ಹಾರಾಡಿದ್ರೆ ಪೈಲಟ್ ಆಗ್ತಿದ್ರು’ ಎಂಬ ಗುಟ್ಟು ಬಂದಿತ್ತು. ಅದಕ್ಕೆ ಅವರು ಗುರುಲಿಂಗ ಸ್ವಾಮೀಜಿ ಎಂದು ಬರೆದಿದ್ದರು. ಆದರೆ ಆ ಗುಟ್ಟು ಜೈ ಜಗದೀಶ್ ಅವರದ್ದಾಗಿತ್ತು. ಜೈ ಜಗದೀಶ್ ಅವರು ಸುಮಾರು ಮೂರು ತಿಂಗಳು ಪೈಲಟ್ ತರಬೇತಿ ಪಡೆದುಕೊಂಡಿದ್ದರು. ಆದರೆ ಇನ್ನೇನು ಪೈಲಟ್ ಆಗಬೇಕು ಎಂದುಕೊಂಡಾಗ ಸಿದ್ದಲಿಂಗ ಅವರ ನಿರ್ದೇಶನದ ‘ಬಿಳಿಗಿರಿಯ ಬಣ’ ಸಿನಿಮಾದ ಸಿನಿಮಾ ಆಫರ್ ಬಂದಿತ್ತು. ಆಗ ಪುಟ್ಟಣ್ಣ ಕಣಗಾಲ್ ಅವರ ಸಲಹೆ ಮೇರೆಗೆ ಪೈಲಟ್ ಕನಸು ಬಿಟ್ಟು ಚಿತ್ರ ತಂಡ ಸೇರಿಕೊಂಡರು.

ದುನಿಯಾ ರಶ್ಮಿ ಅವರಿಗೆ ‘ಮೈಸೂರು ಮಹಾರಾಣಿ ತ್ರಿಷಿಕಾ ಕುಮಾರಿಗೆ ಮಾರ್ಚಿಂಗ್ ಡ್ರಮ್ಸ್ ಟ್ರೈನಿಂಗ್ ಕೊಟ್ಟವರು’ ಎಂಬ ಪ್ರಶ್ನೆ ಬಂದಿತ್ತು. ಅದಕ್ಕೆ ಸರಿಯಾದ ಉತ್ತರ ಚೈತ್ರಾ ವಾಸುದೇವನ್. ಚೈತ್ರಾ ವಾಸುದೇವನ್ ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಓದುತ್ತಿದ್ದಾಗ ತ್ರಿಷಿಕಾ ಕುಮಾರಿ ಅವರು ಕೂಡ ಅಲ್ಲಿಯೇ ಓದುತ್ತಿದ್ದರು. ಆಗ ಚೈತ್ರಾ ವಾಸುದೇವನ್ ಮಹಾರಾಣಿ ಅವರಿಗೆ ಮಾರ್ಚಿಂಗ್ ಡ್ರಮ್ಸ್ ಟ್ರೈನಿಂಗ್ ಕಲಿಸಿದ್ದರು.

ಚೈತ್ರಾ ಕೊಟ್ಟೂರು ಎಸ್.ಎಸ್.ಎಲ್.ಸಿಯಲ್ಲಿ ಕನ್ನಡ ಭಾಷೆಯಲ್ಲಿ 125ಕ್ಕೆ 123 ಅಂಕ ಪಡೆದಿದ್ದರು. ವಾಸುಕಿ ವೈಭವ್ ಅವರು, ನಾಟಕ ಮುಗಿಸಿ ಮನೆಗೆ ಬಂದು ರಾತ್ರಿಯಲ್ಲ ಓದಿ ಬೆಳಗ್ಗೆ ಪರೀಕ್ಷೆ ಬರೆಯೋಕೆ ಬಸ್ಸಿನಲ್ಲಿ ಹೋಗಿದ್ದರು. ಆದರೆ ಬಸ್ಸಿನಲ್ಲಿ ನಿದ್ದೆ ಮಾಡಿದ್ದರು. ಬಳಿಕ ಶಿಕ್ಷಕರಿಗೆ ಮನವಿ ಮಾಡಿಕೊಂಡು ಪರೀಕ್ಷೆ ಬರೆದಿದ್ದರು. ಸುಜಾತಾ ಅವರು ಕಿರಿಕ್ ಮಾಡಿದ್ದ ಆಟೋ ಡ್ರೈವರ್ ಗೆ ಪಂಚ್ ಕೊಟ್ಟಿದ್ದರು.

ಚಂದನ್ ಆಚಾರ್ಯ, ಹೋಟೆಲ್ ನಲ್ಲಿ ಕೆಲಸ ಮಾಡುವಾಗ ಗೆಳೆಯರು ಬಂದಿದ್ದಕ್ಕೆ ಮುಜುಗರ ಪಟ್ಟುಕೊಂಡಿದ್ದರು. ರಾಜು ತಾಳಿಕೋಟೆ ಅವರನ್ನ ಅವರ ಅಜ್ಜಿ ಹುಟ್ಟಿದಾಗಿನಿಂದ ಅಪಶಕುನದ ಮೊಟ್ಟೆ ಎಂದು ಕರೆಯುತ್ತಿದ್ದರು. ಹರೀಶ್ ರಾಜ್ ಶ್ರೀ ಸತ್ಯನಾರಾಯಣ ಸಿನಿಮಾದಲ್ಲಿ ಹರೀಶ್ ರಾಜ್ 16 ಪಾತ್ರಗಳನ್ನು ಒಬ್ಬರೇ ನಿರ್ವಹಿಸಿದ್ದರು ಎಂಬ ಗುಟ್ಟುಗಳನ್ನು ಕಿಚ್ಚ ರಿವಿಲ್ ಮಾಡಿದರು.

Comments

Leave a Reply

Your email address will not be published. Required fields are marked *