ಬೆಂಗ್ಳೂರಿನ ಕಮಲಾನಗರದಲ್ಲಿ ಕಟ್ಟಡ ಕುಸಿಯೋ ಭೀತಿ!

– ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ, ಪರಿಶೀಲನೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಭೀತಿ ಎದುರಾಗಿದೆ. ಯಾವುದೇ ಕ್ಷಣದಲ್ಲಾದ್ರೂ ಕಟ್ಟಡ ಕುಸಿಯುವ ಸಾಧ್ಯತೆಗಳಿವೆ.

ಹೌದು. ಕಮಲಾನಗರದ ಶಂಕರ್‍ನಾಗ್ ಬಸ್ ನಿಲ್ದಾಣದ ಬಳಿ ಇರುವ ಮೂರು ಅಂತಸ್ತಿನ ಕಟ್ಟಡ ಕುಸಿದು ಬೀಳುವ ಹಂತದಲ್ಲಿದೆ. ರಾಜೇಶ್ವರಿ ಎಂಬುವರಿಗೆ ಸೇರಿದ ಬಿಲ್ಡಿಂಗ್ ಕುಸಿಯುತ್ತಿರುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ವಾಸವಿದ್ದ 4 ಕುಟುಂಬ ಹೊರಗೆ ಓಡಿ ಬಂದಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬಹುಮಹಡಿ ಕಟ್ಟಡ ಕುಸಿತ- ತಪ್ಪಿದ ಭಾರೀ ಅನಾಹುತ

ಮನೆಯೊಳಗಡೆ ಪಾತ್ರೆ-ಪಗಟೆ, ಬಟ್ಟೆ, ವಸ್ತುಗಳು ಹಾಗೆಯೇ ಇವೆ. ಸದ್ಯ ಈ 4 ಕುಟುಂಬ ದಿಕ್ಕು ತೋಚದೆ ಕಂಗಾಲಾಗಿವೆ. ಇದೇ ಕಟ್ಟಡದಲ್ಲಿ 6 ಕುಟುಂಬಗಳು ವಾಸವಾಗಿದ್ದವು. ಆದರೆ ಶಿಥಿಲಾವಸ್ಥೆಗೊಂಡಿದ್ದ ಕಾರಣ 3 ಮನೆಗಳನ್ನು ಖಾಲಿ ಮಾಡಲಾಗಿತ್ತು. ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ವರುಣಾರ್ಭಟ – ದಾವಣಗೆರೆಯಲ್ಲಿ 20ಕ್ಕೂ ಹೆಚ್ಚು ಮನೆಗಳು ಜಲಾವೃತ

ಸದ್ಯ ಕಟ್ಟಡದಲ್ಲಿ 4 ಕುಟುಂಬಗಳು ವಾಸವಾಗಿವೆ. ಇದೀಗ ಕುಸಿಯುವ ಹಂತದಲ್ಲಿದ್ದು, ಸ್ಥಳಕ್ಕೆ ಬಿಬಿಎಂಪಿ, ಅಧಿಕಾರಿಗಳು ಹಾಗೂ ಎನ್ ಡಿ ಆರ್ ಎಫ್ ನ ನುರಿತ ತಜ್ಞರಿಂದ ಪರಿಶೀಲನೆ ನಂತರ ತೆರವು ಕಾರ್ಯಾಚರಣೆ ನಡೆಯಲಿದೆ. ಕಟ್ಟಡದ ಸುತ್ತಮುತ್ತ ಮನೆಗೆ ಹಾನಿ ಆಗದಂತೆ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *