ಯುವತಿಯ ಜೊತೆ ನಡುರಸ್ತೆಯಲ್ಲಿ ಅಸಭ್ಯ ವರ್ತನೆ – ಜೆಡಿಎಸ್ ನಾಯಕ, ಪುತ್ರ ಅರೆಸ್ಟ್

ಬೆಂಗಳೂರು: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ರಾಜಕೀಯ ನಾಯಕ ಹಾಗೂ ಅವರ ಮಕ್ಕಳ ದುಂಡಾವರ್ತನೆ ಹೆಚ್ಚಳವಾಗಿದ್ದು, ಯುವತಿಯ ಜೊತೆ ನಡುರಸ್ತೆಯಲ್ಲಿ ಅಸಭ್ಯ ವರ್ತನೆ ಮಾಡಿದ ಆರೋಪದಲ್ಲಿ ಜೆಡಿಎಸ್ ನಾಯಕ ಹಾಗೂ ಆತನ ಪುತ್ರನ ಬಂಧನವಾಗಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ರಾಜ್ಯ ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿಯಾಗಿದ್ದ ನಾರಾಯಣ್, ಆತನ ಪುತ್ರ ನವೀನ್ ಹಾಗೂ ಸಹಚರರನ್ನು ಯುವತಿಯ ಜೊತೆ ಅಸಭ್ಯ ವರ್ತನೆ ಹಾಗೂ ಕೊಲೆ ಬೆದರಿಕೆ ಆರೋಪದಡಿ ಬಂಧಿಸಲಾಗಿದೆ. ಜೆಡಿಎಸ್ ಹಿಂದುಳಿದ ವರ್ಗಗಳ ವಿಭಾಗದ ಪ್ರಧಾನ ಕಾರ್ಯದರ್ಶಿಯ ನವೀನ್ ಹಾಗೂ ಸಹಚರರು ಕೃತ್ಯ ಎಸಗಿದ್ದಾರೆ.

ಏನಿದು ಪ್ರಕರಣ?
ಫೆಬ್ರವರಿ 16ರ ಸಂಜೆ 7,30ರ ವೇಳೆಗೆ ಟ್ಯೂಷನ್ ಮುಗಿಸಿಕೊಂಡು ಬರುತ್ತಿದ್ದ ಯುವತಿಗೆ ನಾರಾಯಣ್ ಆತನ ಪುತ್ರ ನವೀನ್ ಹಾಗೂ ಸಹಚರು ಇನೋವಾ ಕಾರಿನಲ್ಲಿ ಬಂದು ಅಡ್ಡಗಟ್ಟಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ಯುವತಿ ಫೆಬ್ರವರಿ 17 ರಂದು ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿ ನಾರಾಯಣ್ ಮತ್ತು ಪುತ್ರ ನವೀನ್ ನನ್ನು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *