ನಮ್ಮ ಸ್ವಾತಂತ್ರ್ಯ ಗೊಂದಲ, ಸಂಘರ್ಷದಲ್ಲಿದೆ: ಶೋಭಾ ಕರಂದ್ಲಾಜೆ

ಬೆಂಗಳೂರು: ನಮ್ಮ ದೇಶದ ಸ್ವಾತಂತ್ರ್ಯ ಗೊಂದಲ ಮತ್ತು ಸಂಘರ್ಷದಲ್ಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

71 ನೇ ಗಣರಾಜ್ಯೋತ್ಸವದ ಪ್ರಯುಕ್ತ ಸಿ.ಫಾರ್ ಸೊಸೈಟಿಯಿಂದ ಮಹಿಳೆಯರಿಗೆ ಪ್ರೀಡಂ ಪಾರ್ಕ್ ನಿಂದ ಪ್ಯಾಲೇಸ್ ಮೈದಾನದವರೆಗೆ ಬೈಕ್ ರ‌್ಯಾಲಿ ಆಯೋಜನೆ ಮಾಡಲಾಗಿತ್ತು. ಬೈಕ್ ರ‌್ಯಾಲಿ ಕಾರ್ಯಕ್ರಮ ಮುಗಿದ ಬಳಿಕ ಮಾತನಾಡಿದ ಸಂಸದೆ, 71ನೇ ಗಣರಾಜ್ಯೋತ್ಸವವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಬೆಂಗಳೂರಿನ ಯುವಕರು ಮಹಿಳೆಯರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿರೊದು ಖುಷಿ ತಂದಿದೆ. ಸಿ.ಫಾರ್ ಸೊಸೈಟಿಯಿಂದ ಬೈಕ್ ರ‌್ಯಾಲಿ ಮಾಡಿ ಮಡಿದ ಸೈನಿಕರ ಕುಟುಂಬಕ್ಕೆ ಗೌರವಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ನಮ್ಮ ಯುವ ಪೀಳಿಗೆಗಳಿಗೆ ಇಂತಹ ಕಾರ್ಯಕ್ರಮಗಳ ಅಗತ್ಯ ಇದೆ. ದೇಶಕ್ಕೆ ಯಾರು ಯಾರು ತ್ಯಾಗ ಮಾಡಿದ್ರು, ಯಾಕಾಗಿ ಸ್ವಾತಂತ್ರ್ಯ ಬಂತು, ಯಾಕಾಗಿ ನಮ್ಮ ಸ್ವಾತಂತ್ರ್ಯ ಗೊಂದಲದಲ್ಲಿದೇ ಮತ್ತು ಸಂಘರ್ಷದಲ್ಲಿದೆ ನಮ್ಮ ಯುವ ಪೀಳಿಗೆ ಏನ್ ಮಾಡಬೇಕು ಅನ್ನೋದನ್ನ ಈ ಸೊಸೈಟಿ ಮೂಲಕ ನಮ್ಮ ಯುವಕರಿಗೆ ತಿಳಿಸುವ ಕೆಲಸ ಮಾಡುತ್ತಿರುವುದು ಖುಷಿಯ ಸಂಗತಿಯಾಗಿದೆ ಎಂದು ತಿಳಿಸಿದರು.

ಒಟ್ಟಿನಲ್ಲಿ ಸೊಸೈಟಿ ಇಂತಹ ಸಮಾಜಮುಖಿ ಕೆಲಸಗಳನ್ನ ಹೆಚ್ಚೆಚ್ಚು ಮಾಡಲಿ ಎಂದು ಅವರು ಹಾರೈಸಿದರು.

Comments

Leave a Reply

Your email address will not be published. Required fields are marked *