ಮಲಗಿದ್ದ ಮಕ್ಕಳ ಉಸಿರನ್ನೇ ನಿಲ್ಲಿಸಿದ ಟೆಕ್ಕಿ ಪತಿ

ಬೆಂಗಳೂರು: ಊಟ ಮಾಡಿ ಮಲಗಿದ್ದ ಕಂದಮ್ಮಗಳನ್ನು ಪಾಪಿ ತಂದೆಯೇ ಕತ್ತು ಹಿಸುಕಿ ಕೊಂದಿರುವ ದಾರುಣ ಘಟನೆ ಅಕ್ಷಯನಗರದ ಹನಿ ಡವ್ ಅಪಾರ್ಟ್ ಮೆಂಟ್‍ನಲ್ಲಿ ಶುಕ್ರವಾರ ತಡ ರಾತ್ರಿ ನಡೆದಿದೆ.

ತೌಶಿನಿ (3) ಹಾಗೂ ಒಂದೂವರೆ ವರ್ಷದ ಶಾಸ್ತಾ ಕ್ರುರಿ ತಂದೆಯ ದುಷ್ಕೃತ್ಯಕ್ಕೆ ಬಲಿಯಾದ ದುರ್ದೈವಿಗಳು. ವೃತ್ತಿಯಲ್ಲಿ ಶೆಫ್ ಆಗಿದ್ದ ನೀಚ ತಂದೆ ಜತಿನ್ ಇತ್ತೀಚಿಗೆ ಕೆಲಸ ಇಲ್ಲದೇ ಹೆಂಡತಿ ದುಡಿದು ತಂದ ಹಣದಲ್ಲಿ ಜೀವನ ದುಡುತ್ತಿದ್ದ. ಕೆಲಸದ ವಿಚಾರವಾಗಿ ದಂಪತಿಯ ನಡುವೆ ಆಗಾಗ ಗಲಾಟೆಗಳು ನಡೆಯುತ್ತಿತ್ತು.

ಆರೋಪಿ ಜತಿನ್ ಪತ್ನಿ ಲಕ್ಷ್ಮಿ ಶಂಕರಿ ವೃತ್ತಿಯಲ್ಲಿ ಟೆಕ್ಕಿಯಾಗಿದ್ದು, ಬೇರೆ ಬೇರೆ ರಾಜ್ಯದವರಾಗಿದ್ದಾರೆ. ಲಕ್ಷ್ಮಿ ಶಂಕರಿ ತಮಿಳುನಾಡಿನವಳಾಗಿದ್ದು ಆರೋಪಿ ಜತಿನ್ ಕೇರಳದವಾಗಿದ್ದಾನೆ. ಟ್ರೈನ್‍ನಲ್ಲಿ ಇಬ್ಬರು ಪರಿಚಯವಾಗಿ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಇವರ ಪ್ರೀತಿಗೆ ಸಾಕ್ಷಿಯಾಗಿ ಅರುತಿಗೊಂದು ಕಿರುತಿಗೊಂದು ಎಂಬಂತೆ ಒಂದು ಹೆಣ್ಣು ಮಗು ಹಾಗೂ ಒಂದು ಗಂಡು ಮಗು ಇತ್ತು. ಆರೋಪಿ ಜತಿನ್ ಕೈಯಲ್ಲಿ ಕೆಲಸವಿಲ್ಲದೇ ಪತ್ನಿಯ ಹಂಗಿನಲ್ಲಿ ಬದುಕುತ್ತಿದ್ದಿನಿ ಎಂಬ ಚಿಂತೆಯಲ್ಲಿ ಮಾನಸಿಕ ಅಸ್ವಸ್ಥನಾಗಿದ್ದ.

ಜತಿನ್ ನಿನ್ನೆ ರಾತ್ರಿ ಪತ್ನಿ ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಮಂಚದ ಮೇಲೆ ಅಕ್ಕಪಕ್ಕ ಮಲಗಿದ್ದ ಇಬ್ಬರು ಮುದ್ದಾದ ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಪತ್ನಿ ಮನೆಗೆ ಬಂದು ನೋಡಿದಾಗ ಮಕ್ಕಳಿಬ್ಬರ ಸ್ಥಿತಿಕಂಡು ಗಾಬರಿಯಿಂದ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಕೂಡಲೆ ಘಟನಾ ಸ್ಥಳಕ್ಕೆ ಆಗಮಿಸಿದ ಹುಳಿಮಾವು ಠಾಣೆಯ ಪೊಲೀಸರು ಮಕ್ಕಳಿಬ್ಬರನ್ನು ನೋಡಿದಾಗ ಹೆಣ್ಣು ಮಗು ಉಸಿರಾಡುತ್ತಿತ್ತು. ಕೂಡಲೇ ಹೆಣ್ಣು ಮಗುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಹೆಣ್ಣು ಮಗು ಕೂಡ ಸಾವನ್ನಪ್ಪಿದೆ.

ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಹುಳಿಮಾವು ಪೊಲೀಸರು ಆರೋಪಿ ಜತಿನ್‍ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯ ಆರೋಪಿ ಜತಿನ್, ಮಕ್ಕಳು ನನ್ನ ರೀತಿಯಲ್ಲಿ ಬೆಳೆಯುತ್ತಿರಲಿಲ್ಲ. ಬದಲಾಗಿ ಅವಳ ತಾಯಿಯ ರೀತಿಯಲ್ಲಿ ಬೆಳೆಯುತ್ತಿದ್ದವು. ಆಕಾರಣದಿಂದ ನನ್ನಿಬ್ಬರು ಮಕ್ಕಳನ್ನ ಕೊಂದು ಹಾಕಿದ್ದೇನೆ ಎಂದು ಹೇಳಿದ್ದಾನೆ ಎಂಬ ಮಾಹಿತಿ ಲಭಿಸಿದೆ.

Comments

Leave a Reply

Your email address will not be published. Required fields are marked *