ಬೆಂಗಳೂರಿನಲ್ಲಿ ಭಾರೀ ಮಳೆ – 4 ತಿಂಗಳು ಹಿಂದೆ ಬಿದ್ದ ನಮ್ಮ ಮೆಟ್ರೋ ಕಾಮಗಾರಿ

ಬೆಂಗಳೂರು: ರಣಮಳೆಯ(Bengaluru Rain) ಆರ್ಭಟ ಬಿಬಿಎಂಪಿ, ಬಿಡಿಎಯನ್ನೂ ಬಿಟ್ಟಿರಲಿಲ್ಲ. ಈಗ ನಮ್ಮ ಮೆಟ್ರೋಗೂ(Namma Metro) ಮಳೆರಾಯ ಸಂಕಷ್ಟ ತಂದೊಡ್ಡಿದ್ದಾನೆ.

ಮಳೆಯಿಂದಾಗಿ ಎರಡು ಮತ್ತು ಮೂರನೇ ಹಂತದ ಕಾಮಗಾರಿಗೆ ಅಡ್ಡಿಯಾಗಿದೆ. ಇದರಿಂದಾಗಿ ಎಲ್ಲಾ ಕಾಮಗಾರಿಗಳು ಮುಗಿಯಲು 3 ರಿಂದ 4 ತಿಂಗಳು ತಡವಾಗುವ ಸಾಧ್ಯತೆಯಿದೆ.

ಈ ಸಲದ ಮಹಾ ಮಳೆಗೆ ಖುದ್ದು ಬಿಎಂಆರ್‌ಇಎಲ್‌(BMRCL) ಬೆಚ್ಚಿ ಬಿದ್ದಿದೆ. ಮಹಾ ಮಳೆಯಿಂದ ಡ್ರಿಲ್ಲಿಂಗ್ ಕಾರ್ಯಕ್ಕೆ ಅಡ್ಡಿಯಾಗಿದ್ದು, ರಣಮಳೆ 4-5 ತಿಂಗಳ ಕಾಮಗಾರಿಯನ್ನು ನಿಧಾನ ಮಾಡಿದೆ. ಇದನ್ನೂ ಓದಿ: ನಟ ಚೇತನ್ ವಿರುದ್ಧ ಪಂಜುರ್ಲಿ ದೈವಕ್ಕೆ ದೂರು

namma metro

ಅಂಜನಾಪುರ, ಕೊತ್ತನೂರು, ವೈಟ್ ಫೀಲ್ಡ್ ನಲ್ಲಿ ಡಿಪೋ ಕೆಲಸಕ್ಕೂ ಮಳೆ ಬ್ರೇಕ್ ಕೊಟ್ಟಿದೆ. ಮಳೆಯಿಂದ ಕೆಲಸ ನಿಧಾನವಾಗಿದೆ ಎಂದು ಸ್ವತಃ ಬಿಎಂಆರ್‌ಸಿಎಲ್‌ ಎಂ.ಡಿ ಅಜುಂ ಪರ್ವೇಜ್ ಒಪ್ಪಿಕೊಂಡಿದ್ದಾರೆ.

ಮಳೆಯಿಂದ ಕಾಮಗಾರಿಗಳು 4 ತಿಂಗಳು ಹಿಂದೆ ಹೋಗಿದೆ. ಮೆಟ್ರೋದಲ್ಲಿ ಎರಡು ರೀತಿಯ ಕಾಮಗಾರಿಗಳಿವೆ. ಅಂಡರ್ ಗ್ರೌಂಡ್ ಕಾಮಗಾರಿ ಮಾಡುವಾಗ ಪೈಲಿಂಗ್ ವರ್ಕ್ ಮಾಡಲು ತುಂಬಾ ತೊಂದರೆಯಾಗಿದೆ. 5 ತಿಂಗಳಿನಿಂದ ನಮಗೆ ಮಳೆ ಸಮಸ್ಯೆ ಕೊಡ್ತಿದೆ. ಹಲವು ಕಡೆಗಳಲ್ಲಿ ಡಿಪೋ ಕೆಲಸ ನಡೆಯುತ್ತಿದೆ. ಮಳೆ ಹೀಗೆ ಬಂದರೆ ಯಾವ ಕೆಲಸವೂ ಮಾಡಲು ಆಗುವುದಿಲ್ಲ. ವಿಮಾನ ನಿಲ್ದಾಣ ರಸ್ತೆ, ಔಟರ್‌ ರಿಂಗ್‌ ರೋಡ್‌ನಲ್ಲಿ ಕೆಲಸ ಕಡಿಮೆಯಾಗುತ್ತಿದೆ. ಕಾಮಗಾರಿಯಲ್ಲಿ ಮೂರು ನಾಲ್ಕು ತಿಂಗಳು ಹಿಂದೆ ಬಿದ್ದಿದ್ದೇವೆ ಎಂದು ಅಜುಂ ಪರ್ವೇಜ್ ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *