ಬೆಂಗಳೂರು | ಗುರಾಯಿಸಿದ್ದಕ್ಕೆ ರಾಡ್‌ನಿಂದ ತಲೆಗೆ ಹೊಡೆದು ಹತ್ಯೆ

ಬೆಂಗಳೂರು: ಟೀ ಅಂಗಡಿ ಬಳಿ ಗುರಾಯಿಸಿದ್ದಕ್ಕೆ ರಾಡ್‌ನಿಂದ ತಲೆಗೆ ಹೊಡೆದು ಹತ್ಯೆಗೈದಿರುವ ಘಟನೆ ಬೆಂಗಳೂರಿನ (Bengaluru) ಕೋನಪ್ಪನ ಅಗ್ರಹಾರ (Konappana Agrahara) ಬಳಿ ನಡೆದಿದೆ.

ಮೃತ ವ್ಯಕ್ತಿಯನ್ನು ನೂರುಲ್ಲಾ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ನಾಲ್ಕು ಗಿನ್ನಿಸ್ ದಾಖಲೆಗೆ ತಯಾರಿ

ಮೃತ ನೂರುಲ್ಲಾ ಆತನ ಗೆಳೆಯ ಮಣಿಕಂಠನ ಜೊತೆ ಟೀ ಅಂಗಡಿಗೆ ತೆರಳಿದ್ದ. ಈ ವೇಳೆ ಟೀ ಕುಡಿಯುವಾಗ ಅಲ್ಲಿದ್ದ ಗುಂಪೊಂದು ಕಿರಿಕ್ ಮಾಡಿದೆ. ಅದಕ್ಕೆ ಏನೋ ಗುರಾಯಿಸ್ತೀರಾ ಎಂದು ಎರಡು ಗುಂಪುಗಳ ಮಧ್ಯೆ ಗಲಾಟೆ ಶುರುವಾಗಿದೆ. ಗಲಾಟೆ ಮಧ್ಯೆ ಇನ್ನೊಂದು ಗುಂಪಿನವರು ನೂರುಲ್ಲಾಗೆ ರಾಡ್‌ನಿಂದ ತಲೆಗೆ ಹೊಡೆದಿದ್ದಾರೆ. ಇದರಿಂದ ತಲೆಗೆ ಏಟು ಬಿದ್ದು ಪರಿಣಾಮ ನೂರುಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು.

ಆಸ್ಪತ್ರೆಯಲ್ಲಿ ಎರಡು ದಿನ ಕೋಮಾದಲ್ಲಿದ್ದು, ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಹೆಚ್‌ಎಸ್‌ಆರ್ ಲೇಔಟ್ (HSR Layout) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಮಹಾ ಕುಂಭಮೇಳದಿಂದ ಹಿಂದಿರುಗುವಾಗ ಹೃದಯಾಘಾತದಿಂದ ವ್ಯಕ್ತಿ ಸಾವು