– ಪಕ್ಕದಲ್ಲಿ ಮಲಗಿದ್ದ ಗೆಳೆಯನನ್ನ ನೋಡಿ ಪೊಲೀಸರಿಗೆ ದೂರು
ಬೆಂಗಳೂರು: ಮದ್ಯದ ಅಮಲಿನಲ್ಲಿ ಮಲಗಿದ್ದ ಯುವತಿಯ ಮೇಲೆ ಗೆಳೆಯರಿಬ್ಬರು ಸರದಿಯಲ್ಲಿ ಅತ್ಯಾಚಾರ ಎಸಗಿರುವ ಘಟನೆ ಲೋಟ್ಟೆಗೊಲ್ಲಹಳ್ಳಿಯಲ್ಲಿ ನಡೆದಿದೆ.
ನಿಖಿಲ್(19) ಅಭಿನವ್ ಎಂಬ ಇಬ್ಬರು ಗೆಳೆಯರು ಯುವತಿ ಬೆಡ್ ರೂಂನಲ್ಲಿ ಮಲಗಿರುವಾಗ ಅತ್ಯಾಚಾರ ಎಸಗಿದ್ದಾರೆ. ಜನವರಿ 15 ರಂದು ಕೋರಮಂಗಲ ಲೇಔಟ್ ನಲ್ಲಿರುವ ಇಂಡಿಗೋ ಪಬ್ ನಲ್ಲಿ ಪಾರ್ಟಿ ಮಾಡಿದ್ದಾರೆ. ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದು ಯುವತಿ ಪಿಜಿಗೆ ಹೋಗುವ ಸ್ಥಿತಿಯಲ್ಲಿ ಇರಲಿಲ್ಲ. ಯುವತಿ ಅಮಲಿನ ಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡ ಗೆಳೆಯ ನಿಖಿಲ್ ಮನೆಗೆ ಕರೆದುಕೊಂಡು ಹೋಗಿ ಬೆಡ್ ರೂಂ ನಲ್ಲಿ ಮಲಗಿಸಿದ್ದಾನೆ.

ಯುವತಿ ಗಾಢ ನಿದ್ರೆಗೆ ಜಾರಿದಾಗ ನಿಖಿಲ್, ಯುವತಿ ಮೇಲೆ ಎರಗಿದ್ದಾನೆ. ನಂತರ ಗೆಳೆಯ ಅಭಿನವ್ ಹೋಗಿ ಅತ್ಯಾಚಾರ ಎಸಗಿ ಬಂದಿದ್ದಾನೆ. ಯುವತಿ ಬೆಳಗ್ಗೆ ಎದ್ದು ನೋಡಿದಾಗ ಅಭಿನವ್ ಯುವತಿ ಪಕ್ಕದಲ್ಲಿ ಮಲಗಿದ್ದನು. ಇದರಿಂದ ಗಾಬರಿಗೊಂಡ ಯುವತಿ ಕೋಡಿಗೆಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ.
ನಿಖಿಲ್ ಹಾಗೂ ಅಭಿವನ್ ಎಣ್ಣೆಯಲ್ಲಿ ಮತ್ತು ಬರುವ ಮಾತ್ರೆ ಹಾಕಿ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ್ದಾರೆಂದು ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಘಟನೆ ಸಂಬಂಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿ ತನಿಖೆ ಮಾಡುತ್ತಿದ್ದಾರೆ.


Leave a Reply