‘ಸಲಗ’ನಿಗೆ ತಿವಿದ ಖಡ್ಗ – ಪೊಲೀಸರಿಂದ ಎಫ್‌ಐಆರ್‌ಗೆ ಸಿದ್ಧತೆ

ಬೆಂಗಳೂರು: ನಟ ದುನಿಯಾ ವಿಜಯ್ ತನ್ನ ಹುಟ್ಟು ಹಬ್ಬ ಆಚರಣೆ ವೇಳೆ ತಲ್ವಾರ್ ನಿಂದ ಕೇಕ್ ಕಟ್ ಮಾಡಿದ ಹಿನ್ನೆಲೆಯಲ್ಲಿ, ಗಿರಿನಗರ ಪೊಲೀಸರು ಎಫ್‍ಐಆರ್ ದಾಖಲಿಸಲು ಚಿಂತನೆ ನಡೆಸಿದ್ದಾರೆ.

ಅನುಮತಿ ಇಲ್ಲದೇ ತಲ್ವಾರ್ ಅಥವಾ ಯಾವುದೇ ಮಾರಾಕಾಸ್ತ್ರವನ್ನು ಬಹಿರಂಗವಾಗಿ ಉಪಯೋಗಿಸುವಂತಿಲ್ಲ. ಘಟನೆ ಸಂಬಂಧ ಮೂರು ದಿನದ ಒಳಗೆ ಪೊಲೀಸ್ ಠಾಣೆಗೆ ಬಂದು ವಿವರಣೆ ನೀಡುವಂತೆ ಗಿರಿನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ತನಿಖಾಧಿಕಾರಿ ಮುಂದೆ ವಿಜಯ್ ವಿವರಣೆ ನೀಡಿದ ನಂತರ ಶಸ್ತ್ರಾಸ್ತ್ರ ಕಾಯ್ದೆ ಅಡಿ ಆಡಿ ಎಫ್‍ಐಆರ್ ದಾಖಲಿಸಿಕೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇದೇ ವೇಳೆ ರಾತ್ರಿ ಹುಟ್ಟುಹಬ್ಬಕ್ಕೆ ವಿಜಯ್ ಮನೆ ಮುಂದಿನ ರಸ್ತೆ ಬಂದ್ ಮಾಡಿದ್ದು, ಅನುಮತಿ ಇಲ್ಲದೇ ಡಿಜೆ ಮ್ಯೂಸಿಕ್ ಹಾಕಿಕೊಂಡು ಅಕ್ಕಪಕ್ಕದ ಮನೆಯವರಿಗೆ ತೊಂದರೆ ಕೊಟ್ಟಿದ್ದಾರೆ ಎಂದು ಸ್ಥಳೀಯರು ದುನಿಯಾ ವಿಜಯ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್‍ಗೆ ಫೇಸ್‍ಬುಕ್ ನಲ್ಲಿ ಟ್ಯಾಗ್ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ದುನಿಯಾ ವಿಜಯ್ ವಿರುದ್ಧ ಎಫ್‍ಐಆರ್ ದಾಖಲಾಗುವ ಸಾಧ್ಯತೆಯಿದೆ.

Comments

Leave a Reply

Your email address will not be published. Required fields are marked *