ಚಾಲಕನಿಂದ ಬಿಎಂಟಿಸಿ ಬಸ್ಸಿನೊಳಗೆ ಮಿನಿ ಉದ್ಯಾನ ನಿರ್ಮಾಣ

ಬೆಂಗಳೂರು: ಬಿಎಂಟಿಸಿ ಬಸ್ ಚಾಲಕರೊಬ್ಬರು ಪುಟ್ಟ ಪುಟ್ಟ ಗಿಡಗಳನ್ನು ಇಟ್ಟು ಜನರಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.

ನಾರಾಯಣಪ್ಪ ಕಳೆದ 27 ವರ್ಷದಿಂದ ಬಿಎಂಟಿಸಿ ಬಸ್ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾರಾಯಣಪ್ಪ ಕಾವಲ್ ಬೈರಸಂದ್ರದಿಂದ ಯಶವಂತಪುರದ ಮಾರ್ಗದಲ್ಲಿ ಬಸ್ ಓಡಿಸುತ್ತಿದ್ದು, ತಮ್ಮ ಬಸ್ಸಿನಲ್ಲಿ ಪುಟ್ಟ ಪುಟ್ಟ ಗಿಡಗಳನ್ನು ಇಡುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.

ಈ ಬಗ್ಗೆ ಮಾತಾನಾಡಿದ ನಾರಾಯಣಪ್ಪ ಅವರು, “ಜನರಲ್ಲಿ ಪರಿಸರದ ಜಾಗೃತಿ ಮೂಡಿಸಲು ನಾನು ಕಳೆದ ಮೂರು – ನಾಲ್ಕು ವರ್ಷಗಳಿಂದ ಬಸ್ಸಿನಲ್ಲಿ ಪುಟ್ಟ ಪುಟ್ಟ ಗಿಡಗಳನ್ನು ಇಟ್ಟು ಬೆಳೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ನಾರಾಯಣಪ್ಪ ತಮ್ಮ ಬಸ್ಸಿನ ಮುಂಭಾಗದಲ್ಲಿ ಹಾಗೂ ಬಸ್ಸಿನ ಹಿಂದಿಯಲ್ಲಿ ಸುಮಾರು 14 ಗಿಡಗಳನ್ನು ಬೆಳೆಸುತ್ತಿದ್ದಾರೆ. ಅಲ್ಲದೆ ದಿನ ಆ ಗಿಡಗಳಿಗೆ ನೀರು ಹಾಕಿ ಅದನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನಾರಾಯಣಪ್ಪ ಅವರ ಪರಿಸರ ಪ್ರೀತಿ ನೋಡಿ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ನಾರಾಯಣಪ್ಪ ಮಾಡುತ್ತಿರುವ ಈ ಕೆಲಸವನ್ನು ನಾವು ಪ್ರಶಂಸಿಸುತ್ತೇವೆ. ಅವರು ತಮ್ಮ ಬ್ಯುಸಿ ಕೆಲಸದ ನಡುವೆಯೂ ಬಸ್ಸಿನಲ್ಲಿ ಗಿಡ ಬೆಳೆಸಿ ಅದನ್ನು ನೋಡಿಕೊಳ್ಳುತ್ತಿದ್ದಾರೆ. ಇದರಿಂದ ಸಾಕಷ್ಟು ಜನ ಸ್ಫೂರ್ತಿ ಆಗುತ್ತಾರೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *