ಅಭಿಮಾನಿಗಳ ಅಭಿಮಾನದ ಜಾತ್ರೆಯಲ್ಲಿ ಮಿಂದೆದ್ದ ಭರ್ಜರಿ ಜೋಡಿ

ಬೆಂಗಳೂರು: ಸ್ಯಾಂಡಲ್‍ವುಡ್ ಬಹದ್ದೂರ್ ಹುಡುಗ ಧ್ರುವ ಸರ್ಜಾ ಫ್ಯಾನ್ಸ್‍ಗಳಿಗಾಗಿ ಇಂದು ಆರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ತಮ್ಮ ಸಿನಿಮಾ ಜರ್ನಿಯಲ್ಲಿ ಯಶಸ್ಸಿನ ಪ್ರತಿಯೊಂದು ಮೆಟ್ಟಿಲಿನಲ್ಲಿ ಸಾಥ್ ನೀಡುವ ಅಭಿಮಾನಿಗಳಿಗಾಗಿ ಇಡೀ ದಿನವನ್ನು ಧ್ರುವ-ಪ್ರೇರಣಾ ಮುಡಿಪಾಗಿಟ್ಟಿದ್ದು, ಅಭಿಮಾನಿಗಳ ಅಭಿಮಾನದ ಜಾತ್ರೆಯಲ್ಲಿ ಮಿಂದೆದ್ದರು.

ಚಂದನವನದಲ್ಲಿ ಅತೀ ಹೆಚ್ಚು ಫ್ಯಾನ್ಸ್ ಫಾಲೋವರ್ಸ್‍ಗಳನ್ನು ಹೊಂದಿರುವ ನಟರಲ್ಲಿ ಧ್ರುವ ಕೂಡ ಒಬ್ಬರು. ಹಾಗಾಗಿನೇ ಏನೇ ಕಾರ್ಯಕ್ರಮಗಳಿದ್ರು ಅದನ್ನು ಅಭಿಮಾನಿಗಳ ಜೊತೆಗೆ ಆಕ್ಷನ್ ಪ್ರಿನ್ಸ್ ಆಚರಣೆ ಮಾಡುತ್ತಾರೆ. ಅಭಿಮಾನಿಗಳನ್ನು ವಿವಿಐಪಿಗಳೆಂದು ಕರೆಯುತ್ತಾರೆ. ಆ ಕಾರಣಕ್ಕೆ ಇಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗಾಗಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಒಂದು ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದರು. ಅಲ್ಲದೆ ಸಾವಿರಾರು ಸಂಖ್ಯೆಯಲ್ಲಿ ನೆರದಿದ್ದ ಅಭಿಮಾನಿಗಳಿಗೆ ಮದುವೆಯ ಊಟದ ವ್ಯವಸ್ಥೆಯನ್ನು ಮಾಡಿಸಿದ್ದರು.

ಭರ್ಜರಿ ದಂಪತಿಯನ್ನು ನೋಡಿ ಅಭಿಮಾನಿಗಳು ಮೇಡ್ ಫಾರ್ ಈಚ್ ಅದರ್ ಎಂದಿದ್ದಾರೆ. ಇಬ್ಬರು ನೂರು ಕಾಲ ಈಗೇ ಸುಖವಾಗಿರಲಿ ಅಂತ ಆಶೀರ್ವದಿಸಿದ್ರು. ಧ್ರುವ-ಪ್ರೇರಣಾಗೆ ವಿಶ್ ಮಾಡಿ, ಸಾಲಾಗಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು. ನಿರೀಕ್ಷೆಗೂ ಮೀರಿ ಅಭಿಮಾನಿಗಳು ಜಮಾಯಿಸಿದರಿಂದ ಸ್ಟೇಜ್ ಮೇಲೆ ಕೆಲಕಾಲ ನೂಕು ನುಗ್ಗಲು ಉಂಟಾಯ್ತು. ಆತಂಕದ ಪರಿಸ್ಥಿತಿ ಕೂಡ ನಿರ್ಮಾಣವಾಗಿತ್ತು.

ಕೆಲ ಸಮಯದ ಬಳಿಕ ಪರಿಸ್ಥಿತಿಯನ್ನು ಹತ್ತೋಟಿಗೆ ತಂದ ಸಿಬ್ಬಂದಿ ಎಲ್ಲರಿಗೂ ಧ್ರುವ- ಪ್ರೇರಣಾರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿಕೊಟ್ಟರು. ನೆಚ್ಚಿನ ಅಭಿಮಾನಿಗಳನ್ನು ಒಂದೇ ಸೂರಿನಡೀ ನೋಡಿದ ನವದಂಪತಿ ಧ್ರುವ- ಪ್ರೇರಣಾ ಧನ್ಯತಾ ಭಾವದಲ್ಲಿದ್ದರು. ಇವರ ಪ್ರೀತಿಗೆ ಸರಿಸಾಟಿಯಾರಿಲ್ಲ ಎಂದಿದ್ದಾರೆ.

ಧ್ರುವ- ಪ್ರೇರಣಾರನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಲ್ಲಿದ್ರು. ಸಾವಿರಾರು ಸಂಖ್ಯೆಯಲ್ಲಿ ಬಂದ ಅಭಿಮಾನಿಗಳಿಗೆ ನಿರಾಸೆಯಾಗದಂತೆ ನೋಡಿಕೊಂಡರು.

Comments

Leave a Reply

Your email address will not be published. Required fields are marked *