ಪೊಗರು ನಂತ್ರ ರಿಮೇಕ್ ಸಿನಿಮಾ ಮಾಡ್ತಾರಾ ಧ್ರುವ ಸರ್ಜಾ?

ಬೆಂಗಳೂರು: ಪೊಗರು ಸಿನಿಮಾದಲ್ಲಿ ನಿರತರಾಗಿರುವ ಧ್ರುವ ಸರ್ಜಾ ಅವರು, ಈ ಸಿನಿಮಾದ ನಂತರ ರಿಮೇಕ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಜೋರಾಗಿ ಕೇಳಿಬರುತ್ತಿದೆ.

ಹೌದು ಧ್ರುವ ಸರ್ಜಾ ಅವರು ಸದ್ಯ ನಂದ ಕಿಶೋರ್ ನಿರ್ದೇಶನದ ಪೊಗರು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಚಿತ್ರೀಕರಣ ಮುಗಿಸಿ ಮುಂದಿನ ತಿಂಗಳು ಅಂದರೆ ಏಪ್ರಿಲ್ ಅಂತ್ಯಕ್ಕೆ ಅಥವಾ ಮೇ ಮೊದಲ ವಾರದಲ್ಲಿ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಈ ಮಧ್ಯದಲ್ಲಿ ಧ್ರುವ ಅವರ ಮುಂದಿನ ಸಿನಿಮಾದ ತಯಾರಿ ಜೋರಾಗಿ ನಡೆಯುತ್ತಿದೆ.

ಧ್ರುವ ಸರ್ಜಾ ಅವರು ಇಲ್ಲಿಯವರೆಗೂ ಅಭಿನಯಿಸಿದ ನಾಲ್ಕು ಸಿನಿಮಾಗಳು ಕೂಡ ಸ್ವಮೇಕ್ ಸಿನಿಮಾಗಳಾಗಿದ್ದವು. ಆದರೆ ಧ್ರುವ ಅವರು ತಮ್ಮ ಮುಂದಿನ ಸಿನಿಮಾವನ್ನು ತೆಲುಗಿನ ಕನ್ನಡ ರಿಮೇಕ್ ನಲ್ಲಿ ಅಭಿನಯಿಸಿಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ಕೂಡ ನಂದ ಕಿಶೋರ್ ಅವರೇ ನಿರ್ದೇಶನ ಮಾಡಲಿದ್ದಾರೆ. ಇದರ ಬಗ್ಗೆ ಅಧಿಕೃತವಾಗಿ ಘೋಷಣೆ ಆಗದಿದ್ದರೂ ಚಿತ್ರದ ಮಾತುಕತೆ ಈಗಾಗಲೇ ಮುಗಿದಿದೆ ಎನ್ನಲಾಗಿದೆ.

ಈ ಚಿತ್ರವನ್ನು ಕನ್ನಡದಲ್ಲಿ ‘ಅಧ್ಯಕ್ಷ ಇನ್ ಅಮೆರಿಕ’ ಸಿನಿಮಾ ನಿರ್ಮಾಣ ಮಾಡಿದ್ದ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ, ಧ್ರುವ ಅವರ ಮುಂದಿನ ರೀಮೇಕ್ ಸಿನಿಮಾವನ್ನು ನಿರ್ಮಾಣ ಮಾಡಲಿದೆ. ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ತೆಲುಗಿನಲ್ಲಿ ‘ನಿನ್ನು ಕೋರಿ’ ಎಂಬ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಈ ಚಿತ್ರ ಅಲ್ಲಿ ಹಿಟ್ ಆಗಿತ್ತು. ಈ ಸಿನಿಮಾವನ್ನೇ ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದರಾ? ಎಂಬ ಪ್ರಶ್ನೆ ಕೂಡ ಮೂಡಿದೆ.

ಅಭಿನಯಿಸಿದ ನಾಲ್ಕೇ ಚಿತ್ರದಲ್ಲಿ ದೊಡ್ಡ ಸೂಪರ್ ಸ್ಟಾರ್ ಆದ ಧ್ರುವ ತನ್ನದೇ ಆದ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಇತ್ತೀಚೆಗೆ ಮದುವೆಯಾಗಿದ್ದ ಧ್ರುವ ಅವರು ಸತತ ಮೂರು ವರ್ಷಗಳಿಂದ ಪೊಗರು ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ಮಾಸ್ ಆಗಿ ಕಾಣಿಸಿಕೊಂಡಿರುವ ಧ್ರುವ ಸರ್ಜಾಗೆ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿ ಆಗಿದ್ದಾರೆ. ಈ ಚಿತ್ರಕ್ಕೆ ಬಿಗ್‍ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ.

Comments

Leave a Reply

Your email address will not be published. Required fields are marked *